ನ್ಯೂಯಾರ್ಕ್: ಬ್ರಿಟನ್ ಮೂಲದ ಅಮೆರಿಕ ನಟಿ ಲಿಲ್ಲಿ ಕೋಲಿನ್ಸ್ (lilly collins) ಅವರು ಸೆಪ್ಟೆಂಬರ್ 12 ರಂದು ನ್ಯೂಯಾರ್ಕ್ ಫ್ಯಾಶನ್ ವೀಕ್ನಲ್ಲಿ ಭಾಗವಹಿಸಿದ್ದರು.

ಆದರೆ, ಅವರ ಉಡುಗೆಗಿಂತ ಅವರ ಸೊಂಟವೇ ಹೆಚ್ಚಿಗೆ ಚರ್ಚೆಯಾಗಿದೆ.

36 ವರ್ಷದ ಈ ಹಾಲಿವುಡ್ ನಟಿ ಯಾವುದೋ ಕಠಿಣ ಮಾದರಿಯ ಡಯಟ್ ಅಳವಡಿಸಿಕೊಂಡು ಕಣ್ಣುಕುಕ್ಕಿಸುವಂತೆ ಸೊಂಟದ ಆಕಾರವನ್ನ ಬದಲಿಸಿಕೊಂಡಿದ್ದಾರೆ.

ಆದರೆ, ಅವರ ಈ ನೋಟವನ್ನು ಹಲವರು ವಿರೋಧಿಸಿದ್ದಾರೆ. ಅನೇಕ ನೆಟ್ಟಿಗರು ನಿಮ್ಮ ಸೊಂಟಕ್ಕೆ ಏನಾಯಿತು, ನೀವು ಊಟ ಮಾಡುತ್ತಿರುವಿರೋ? ಈ ರೀತಿಯ ಡಯಟ್ ಅನಾರೋಗ್ಯಕ್ಕೆ ಕಾರಣವಾದೀತು ಎಂದು ಎಚ್ಚರಿಸಿದ್ದಾರೆ.

ಅನೇಕರು ಇದು ಯಾವ ರೀತಿಯ ಡಯಟ್ ನಿಮ್ಮನ್ನು ಹೀಗೆ ಮಾಡಿದೆ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಇದು ಅನ್ ಹೆಲ್ದಿ ಡಯಟ್ ಎಂದು ಜರಿದಿದ್ದಾರೆ. ತೂಕ ಇಳಿಸುವಿಕೆಯ ಪರಮಾವಧಿ ಎಂದು ಇನ್ನೂ ಕೆಲವರು ಆಡಿಕೊಂಡಿದ್ದಾರೆ.

ಲಿಲ್ಲಿ ಎಮಿಲಿ ಇನ್ ಫ್ಯಾರಿಸ್ ಎಂಬ ವೆಬ್ ಸಿರೀಸ್ ಮೂಲಕ ಲಿಲ್ಲಿ ಕೋಲಿನ್ಸ್ ಜನಪ್ರಿಯರಾಗಿದ್ದಾರೆ. ಈ ಕುರಿತು ದಿ ಹಿಂದೂಸ್ತಾನ್ ಟೈಮ್ಸ್ ವೆಬ್ಸೈಟ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.