ಸಿಂಹಗಳು ಸಂದರ್ಶನ ಕೊಡುವುದಿಲ್ಲ: ‘ಪಠಾಣ್’ನ ಪ್ರಚಾರ ತಂತ್ರದ ಬಗ್ಗೆ ಶಾರೂಕ್ ಮಾತು

ಮುಂಬೈ: ಯಾವುದೇ ಪ್ರಚಾರಗಳನ್ನು ಮಾಡದಿದ್ದರೂ 'ಪಠಾಣ್' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಬಗ್ಗೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಉತ್ತರಿಸಿದ್ದಾರೆ.
‘ಪಠಾಣ್’ ಚಿತ್ರಕ್ಕೆ ಅನುಸರಿಸಲಾದ ಪ್ರಚಾರದ ತಂತ್ರದ ಬಗ್ಗೆ ಮಾತನಾಡುತ್ತಾ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಖಾನ್, ‘ಸಿಂಹಗಳು ಸಂದರ್ಶನಗಳನ್ನು ನೀಡುವುದಿಲ್ಲ, ಹಾಗಾಗಿ (ನಾನೂ) ನೀಡುವುದಿಲ್ಲ’ ಎಂದು ಹೇಳಿದ್ದಾರೆ.
Maine socha Sher interview nahi karte toh iss baar main bhi nahi karunga!!! Bas Jungle mein aakar dekh lo. #Pathaan https://t.co/ORPf0LkKh9
— Shah Rukh Khan (@iamsrk) January 28, 2023
ಚಿತ್ರಮಂದಿರಗಳೇ ಅರಣ್ಯ ಎಂದು ಕರೆದಿರುವ ಎಸ್‌ಆರ್‌ಕೆ, ನನ್ನನ್ನು ನೋಡಲು ಥಿಯೇಟರ್‌ಗಳಿಗೆ ಬನ್ನಿ ಎಂದು ಅಭಿಮಾನಿಗೆ ಹೇಳಿದ್ದಾರೆ.
ಪ್ರಮೋಷನ್, ಸಂವಾದಗಳನ್ನು ಒಳಗೊಂಡ ಪ್ರಚಾರ ತಂತ್ರಗಳಿಂದ ದೂರವೇ ಉಳಿದಿದ್ದ ‘ಪಠಾಣ್’ ಚಿತ್ರ ಬಿಡುಗಡೆಗೂ ಮೊದಲು ವಿವಾದಕ್ಕೆ ಕಾರಣವಾಗಿತ್ತು.
ಚಿತ್ರದ ‘ಬೇಷರಮ್ ರಂಗ್’ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಬಟ್ಟೆ ಧರಿಸಿ ನರ್ತಿಸಿದ್ದರು. ಕೇಸರಿ ಬಣ್ಣವನ್ನು ಅವಮಾನಿಸುವ ಸಾಲುಗಳು ಗೀತೆಯಲ್ಲಿದೆ ಎಂಬ ಆಕ್ರೋಶವೂ ವ್ಯಕ್ತವಾಗಿತ್ತು. ಈ ಮೂಲಕ ಚಿತ್ರತಂಡ ಕೆಲವರ ಭಾವನೆ ಘಾಸಿಗೊಳಿಸಿದೆ ಎಂದು ಕೆಲ ಬಲಪಂಥೀಯ ಸಂಘಟನೆಗಳು ಚಿತ್ರ ಬಾಯ್ಕಾಟ್ ಕರೆ ನೀಡಿದ್ದವು. ದೇಶದ ಕೆಲವೆಡೆ ಪ್ರತಿಭಟನೆ, ಚಿತ್ರಮಂದಿರಕ್ಕೆ ದಾಳಿಯ ನಡುವೆಯೂ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಪಠಾಣ್ ಯಶಸ್ವಿಯಾಗಿದೆ. 4 ದಿನದಲ್ಲಿ ಚಿತ್ರ ವಿಶ್ವದಾದ್ಯಂತ ₹429 ಕೋಟಿ ಗಳಿಸಿದೆ.
ಇವುಗಳನ್ನೂ ಮಾಡಿ
ಪಠಾಣ್ ವಿರುದ್ಧ ನಿಲ್ಲದ ಬಲಪಂಥೀಯರ ಆಕ್ರೋಶ: 9 ಮಂದಿ ವಶಕ್ಕೆ
ಪಠಾಣ್ ₹400 ಕೋಟಿ ಗಳಿಕೆ: ಲೆಕ್ಕ ಸುಳ್ಳು ಎನ್ನುತ್ತಿರುವ ಕೆಲ ನೆಟ್ಟಿಗರು!
ಲಡಾಖ್ನ ಮೊಬೈಲ್ ಥಿಯೇಟರ್ನಲ್ಲಿ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಪ್ರದರ್ಶನ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.