‘ಲವ್ ಮಾಕ್ಟೇಲ್’ ಚಿತ್ರತಂಡದಿಂದ ಪ್ರೇಮಿಗಳಿಗಾಗಿ ಒಂದು ಸಿಹಿ ಸುದ್ದಿ ಬಂದಿದೆ. ‘ಪ್ರೇಮಿಗಳ ದಿನ ಲವ್ ಮಾಕ್ಟೇಲ್ ಚಿತ್ರ ವೀಕ್ಷಿಸಲು ಏಕಪರದೆಯ ಚಿತ್ರಮಂದಿರಗಳಿಗೆ ಬರುವ ಜೋಡಿಗಳು, ಒಟ್ಟಿಗೆ ಕುಳಿತು ಸಿನಿಮಾ ವೀಕ್ಷಿಸಲು ಎರಡು ಟಿಕೆಟ್ ಖರೀದಿ ಮಾಡಬೇಕಾಗಿಲ್ಲ! ಒಂದು ಟಿಕೆಟ್ ಖರೀದಿ ಮಾಡಿದರೆ, ಇನ್ನೊಂದು ಟಿಕೆಟ್ ಉಚಿತ. ಒಂದು ಟಿಕೆಟ್ನ ದುಡ್ಡಿನಲ್ಲಿ ಇಬ್ಬರೂ ಆರಾಮವಾಗಿ ಸಿನಿಮಾ ನೋಡಬಹುದು’ ಎಂದು ಸಿನಿತಂಡ ಹೇಳಿದೆ.

ಜನವರಿ 31ಕ್ಕೆ ತೆರೆಗೆ ಬಂದ ಈ ಸಿನಿಮಾ, ಅದಾದ ಒಂದು ವಾರದ ನಂತರ ಬೆಂಗಳೂರಿನಲ್ಲಿ ಒಂದು ಚಿತ್ರಮಂದಿರದಲ್ಲಿ (ಶಾರದಾ ಚಿತ್ರಮಂದಿರ) ಮಾತ್ರ ಉಳಿದುಕೊಂಡಿತ್ತು. ಈ ಚಿತ್ರದಲ್ಲಿ ಅಭಿನಯಿಸಿ, ಬಂಡವಾಳ ಕೂಡ ಹೂಡಿರುವ ಮಿಲನಾ ನಾಗರಾಜ್ ಅವರಿಗೆ ಆ ಹೊತ್ತಿನಲ್ಲಿ ತುಸು ಆತಂಕ ಆಗಿತ್ತು. ‘ಜನ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಆದರೂ ಚಿತ್ರಮಂದಿರಗಳು ನಮಗೆ ಸಿಗುತ್ತಿಲ್ಲ’ ಎಂದು ಅವರು ಬೇಸರ ತೋಡಿಕೊಂಡಿದ್ದರು.

ಅದಾದ ನಂತರ, ಈ ಚಿತ್ರಕ್ಕೆ ಒಂದಿಷ್ಟು ಚಿತ್ರಮಂದಿರಗಳು ಸಿಕ್ಕವು. ಅಷ್ಟೇ ಅಲ್ಲ, ‘ಹಲವೆಡೆ ಹೌಸ್ಫುಲ್ ಪ್ರದರ್ಶನ ಕೂಡ ನಡೆಯುತ್ತಿವೆ’ ಎಂದು ಮಿಲನಾ ಹೇಳುತ್ತಾರೆ. ‘ಈ ಚಿತ್ರದ ಹೂರಣದ ಬಗ್ಗೆ ನಮಗೆ ಬಹಳ ವಿಶ್ವಾಸ ಇತ್ತು. ಜನ ಈ ಚಿತ್ರದ ಕೈಬಿಡುವುದಿಲ್ಲ ಎಂಬ ನಂಬಿಕೆ ಇತ್ತು’ ಎನ್ನುವುದು ಅವರ ಮಾತು.

‘ಸಿನಿಮಾ ಅದ್ಭುತವಾಗಿದೆ ಎಂದು ಎಲ್ಲರೂ ಹೇಳಿದ್ದರು. ಆದರೆ ಸಿನಿಮಾ ಮಂದಿರಗಳಲ್ಲಿ ಕಲೆಕ್ಷನ್ ಬಹಳ ಕಡಿಮೆ ಆಗಿತ್ತು. ಆಗ ತಲೆಬಿಸಿ ಶುರುವಾಗಿತ್ತು. ಈಗ ಹಲವು ಕಡೆ ಹೌಸ್ಫುಲ್ ಪ್ರದರ್ಶನ ಕಂಡು ಖುಷಿಯಾಗಿದೆ. ನಾನು ನಿರ್ದೇಶಿಸಿದ ಸಿನಿಮಾವನ್ನು ಇಷ್ಟು ಜನ ವೀಕ್ಷಿಸುತ್ತಿರುವುದನ್ನು ಕಂಡು ಮನಸ್ಸು ಭಾವುಕವಾಗುತ್ತಿದೆ’ ಎಂದರು ನಿರ್ದೇಶಕ ಡಾರ್ಲಿಂಗ್ ಕೃಷ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.