ಅನೀಶ್ ತೇಜೇಶ್ವರ್ ನಟಿಸಿ, ನಿರ್ದೇಶಿಸಿರುವ ‘ಲವ್ ಒಟಿಪಿ’ ನವೆಂಬರ್ 14ರಂದು ತೆರೆಗೆ ಬರಲಿದೆ. ತಂದೆ ಮಗನ ಸಂಬಂಧ, ಪ್ರೀತಿ, ಪ್ರೇಮ ಸೇರಿದಂತೆ ಕಮರ್ಷಿಯಲ್ ಅಂಶಗಳನ್ನು ಹೊಂದಿರುವ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿದ್ಧಗೊಂಡಿದೆ.

‘ಸ್ನೇಹಿತ ವಿಜಯ್ ರೆಡ್ಡಿ ಅವರ ಸಹಕಾರದಿಂದ ಉತ್ತಮ ಚಿತ್ರ ಮಾಡಿದ್ದೇನೆ. ಚಿತ್ರ ನೋಡಿದವರು ಶ್ಲಾಘಿಸುತ್ತಿದ್ದಾರೆ. ಪ್ರೇಮಕಥೆಯ ಜತೆಗೆ ಮನರಂಜನೆ ಅಂಶಗಳನ್ನು ಹೊಂದಿರುವ ಚಿತ್ರ. ತೆಲುಗಿನ ಹಿರಿಯ ಕಲಾವಿದ ರಾಜೀವ್ ಕನಕಾಲ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿದ್ದಾರೆ. ಜತೆಗೆ ಡಬ್ ಕೂಡ ಮಾಡಿದ್ದಾರೆ’ ಎಂದರು ಅನೀಶ್.

ವಿಜಯ್ ರೆಡ್ಡಿ ಭಾವಪ್ರೀತ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಜಾನ್ವಿಕಾ ಅನೀಶ್ಗೆ ಜೋಡಿಯಾಗಿದ್ದಾರೆ. ರವಿ ಭಟ್, ಪ್ರಮೋದಿನಿ, ತುಳಸಿ, ಚೇತನ್, ಸ್ವರೂಪಿಣಿ ಮುಂತಾದವರು ಚಿತ್ರದಲ್ಲಿದ್ದಾರೆ.

‘ಕನ್ನಡದಲ್ಲಿ ನನ್ನ ಮೂರನೇ ಚಿತ್ರ. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿದ್ದು, ಎರಡರಲ್ಲಿಯೂ ನಟಿಸಿದ್ದೇನೆ. ಫಿಸಿಯೊ ಥೆರಪಿಸ್ಟ್ ಪಾತ್ರ. ಸವಾಲಿನಿಂದ ಕೂಡಿದ ಪಾತ್ರವಾಗಿತ್ತು’ ಎಂದರು ಜಾನ್ವಿಕಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.