ಸಾಯಿರಾ ಬಾನು ಜತೆ ವಿವಾಹವಾಗಿದ್ದ ದಿಲೀಪ್ ಕುಮಾರ್ ಪ್ರೇಮ ಕಥೆ

ಮುಂಬೈ: ಸಾಯಿರಾ ಬಾನು ಅವರನ್ನು ದಿಲೀಪ್ ಕುಮಾರ್ ವಿವಾಹವಾದಾಗ ಅವರ ವಯಸ್ಸು 44.. ಮತ್ತು ಸಾಯಿರಾ ವಯಸ್ಸು 22!
ದಿಲೀಪ್ ಕುಮಾರ್ ಮತ್ತು ಸಾಯಿರಾ ಬಾನು 1966ರ ಅಕ್ಟೋಬರ್ 11ರಂದು ಮದುವೆಯಾದರು. ಈ ದಂಪತಿಗೆ ಮಕ್ಕಳಿಲ್ಲ.
ತಮ್ಮ ಆತ್ಮಚರಿತ್ರೆ ‘ದಿ ಸಬ್‌ಸ್ಟ್ಯಾನ್ಸ್ ಆಂಡ್ ದಿ ಶಾಡೋ’ ದಲ್ಲಿ ದಿಲೀಪ್ ಕುಮಾರ್ ಈ ಬಗ್ಗೆ ವಿವರಿಸಿದ್ದಾರೆ. ಬಾನು 1972ರಲ್ಲಿ ಗರ್ಭವತಿಯಾಗಿದ್ದರು, ಆದರೆ ಎಂಟನೇ ತಿಂಗಳ ಅವಧಿಯಲ್ಲಿ ಅವರಿಗೆ ಅಧಿಕ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿತು. ಹೀಗಾಗಿ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮತ್ತೆ ಅವರು ಮಕ್ಕಳನ್ನು ಹೊಂದದೇ ಇರಲು ನಿರ್ಧರಿಸಿದ್ದರು.
ದಿಲೀಪ್ ಕುಮಾರ್ (98) ಬುಧವಾರ ನಿಧನರಾಗಿದ್ದಾರೆ. ಅವರ ಪತ್ನಿ ಸಾಯಿರಾ ಬಾನು (76), ದಿಲೀಪ್ ಕುಮಾರ್ ಜತೆ ಸುಮಾರು 55 ವರ್ಷಗಳ ದಾಂಪತ್ಯ ಅನುಭವಿಸಿದ್ದಾರೆ.
1952ರಲ್ಲಿ ದಿಲೀಪ್ ಕುಮಾರ್ ನಟನೆಯ ‘ಆನ್’ ಚಿತ್ರವನ್ನು ಸಾಯಿರಾ ವೀಕ್ಷಿಸಿದಾಗ, ಮುಂದೊಂದು ದಿನ ನಾನು ಶ್ರೀಮತಿ ದಿಲೀಪ್ ಕುಮಾರ್ ಆಗಲಿದ್ದೇನೆ ಎನ್ನುವ ಕುರಿತು ಕೂಡ ಯೋಚಿಸಿರಲಿಕ್ಕಿಲ್ಲ.
ಮರೆಯಾದ ಬಾಲಿವುಡ್ ದಿಗ್ಗಜ ದಿಲೀಪ್ ಕುಮಾರ್; ಪ್ರಧಾನಿ ಸೇರಿದಂತೆ ಗಣ್ಯರ ಸಂತಾಪ
ಸಾಯಿರಾ 1960ರಲ್ಲಿ 16 ವರ್ಷದವರಿದ್ದಾಗಲೇ ಹಿಂದಿ ಚಲನಚಿತ್ರಗಳಲ್ಲಿ ನಟಿಸಲು ತೊಡಗಿದರು. ನಸೀಮ್ ಬಾನು ಪುತ್ರಿಯಾಗಿದ್ದ ಸಾಯಿರಾ, ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಸಕಲ ಸರ್ಕಾರಿ ಗೌರವಗಳೊಂದಿಗೆ ನಟ ದಿಲೀಪ್ ಕುಮಾರ್ ಅಂತ್ಯಕ್ರಿಯೆ
ಮದುವೆಗೂ ಮುನ್ನ ನಟ ದಿಲೀಪ್ ಕುಮಾರ್ ಹೆಸರು ಚಿತ್ರರಂಗದ ಹಲವು ಯುವತಿಯರ ಜತೆ ಕೇಳಿಬಂದಿತ್ತು.
Photo Album | ದಿಲೀಪ್ ಕುಮಾರ್ ನಿಧನ: ವರ್ಣ ಚಿತ್ರಗಳಲ್ಲಿ ‘ದುರಂತ ನಾಯಕ’...
ದಿಲೀಪ್ ಸಾಬ್‌ರನ್ನು ಸಾಯಿರಾ ಜಿ ಅವರು ಅತ್ಯಂತ ಪ್ರೀತಿಯಿಂದ, ಹೂವಿನಂತೆ ನೋಡಿಕೊಳ್ಳುತ್ತಿದ್ದರು ಎಂದು ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.