ಸೋಮವಾರ, ಮಾರ್ಚ್ 27, 2023
32 °C

ಏಪ್ರಿಲ್‌ 16: ತೆರೆ ಮೇಲೆ ಬರಲಿದೆ ಸಾಯಿಪಲ್ಲವಿ, ನಾಗಚೈತನ್ಯ ಜೋಡಿಯ ‘ಲವ್‌ಸ್ಟೋರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ ಹಾಗೂ ನಾಗಚೈತನ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಲವ್‌ಸ್ಟೋರಿ' ಸಿನಿಮಾ ಏಪ್ರಿಲ್ 16ಕ್ಕೆ ತೆರೆ ಕಾಣಲಿದೆ. ಅದೇ ದಿನ ನಾನಿ ನಟನೆಯ 'ಟಕ್ ಜಗದೀಶ್' ಕೂಡ ಬಿಡುಗಡೆಯಾಗುತ್ತಿದೆ. ಲವ್‌ಸ್ಟೋರಿ ಸಿನಿಮಾ 2020ರ ಬೇಸಿಗೆಯಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಲಾಕ್‌ಡೌನ್ ಕಾರಣದಿಂದ ಶೂಟಿಂಗ್‌ ಬ್ರೇಕ್‌ ಹಾಕಲಾಗಿದ್ದು ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು.

ಲವ್‌ಸ್ಟೋರಿ ಬಿಡುಗಡೆಯ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಘೋಷಿಸಿಕೊಂಡಿರುವ ನಿರ್ಮಾಣ ಸಂಸ್ಥೆ ಶ್ರೀ ವೆಂಕಟೇಶ್ವರ ಸಿನಿಮಾಸ್‌ ಹೊಸ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿತ್ತು.

ನಾರಾಯಣ ದಾಸ್‌ ಕೆ. ನಾರಂಗ್‌ ಹಾಗೂ ಪುಸ್ಕುರ್ ರಾಮ ಮೋಹನ್ ರಾವ್ ನಿರ್ಮಾಣದ ಈ ಚಿತ್ರ ರೊಮ್ಯಾಂಟಿಕ್ ಕಥಾಹಿನ್ನೆಲೆಯನ್ನು ಹೊಂದಿದೆ. ರಾಜೀವ ಕಣಕಾಲ, ಈಶ್ವರಿ ರಾವ್‌, ದೇವಯಾನಿ ಮೊದಲಾದವರು ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಶೇಖರ ಕಮ್ಮುಲಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಸದ್ಯ ನಾಗಚೈತನ್ಯ ವಿಕ್ರಂ ಕೆ. ಕುಮಾರ್ ನಿರ್ದೇಶದನ ‘ಥ್ಯಾಂಕ್ ಯೂ’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿದ್ದಾರೆ. ಸಾಯಿಪಲ್ಲವಿ ‘ಶ್ಯಾಮ್ ಸಿಂಗ್ ರಾಯ್’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು