ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಸ್ತ್ರೀಯ ಸಂಗೀತ ಮಾಂತ್ರಿಕ ಪಂಡಿತ್ ಜಸರಾಜ್ ಅವರ ಪತ್ನಿ ಮಧುರಾ ಜಸರಾಜ್ ನಿಧನ

Published : 25 ಸೆಪ್ಟೆಂಬರ್ 2024, 5:32 IST
Last Updated : 25 ಸೆಪ್ಟೆಂಬರ್ 2024, 5:32 IST
ಫಾಲೋ ಮಾಡಿ
Comments

ಮುಂಬೈ: ಖ್ಯಾತ ಚಲನಚಿತ್ರ ನಿರ್ಮಾಪಕ ವಿ. ಶಾಂತಾರಾಮ್ ಅವರ ಪುತ್ರಿ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮಾಂತ್ರಿಕ ಪಂಡಿತ್ ಜಸರಾಜ್ ಅವರ ಪತ್ನಿ ಮಧುರಾ ಜಸರಾಜ್ ಅವರು ವಯೋಸಹಜ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ.

ಮಧುರಾ ಜಸರಾಜ್ (86) ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಮುಂಬೈನ ಓಶಿವಾರಾದ ಚಿತಾಗಾರದಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಜಸರಾಜ್ ಕುಟುಂಬದ ಮೂಲಗಳು ತಿಳಿಸಿವೆ.

ಚಿತ್ರರಂಗದಲ್ಲಿ ಬರಹಗಾರ್ತಿಯಾಗಿ, ನಿರ್ಮಾಪಕಯಾಗಿ, ನೃತ್ಯ ಸಂಯೋಜಕಿಯಾಗಿ ಸಕ್ರಿಯರಾಗಿದ್ದ ಮಧುರಾ ಅವರು ತಮ್ಮ ಪತಿಗೆ ಗೌರವಾರ್ಥವಾಗಿ 2009ರಲ್ಲಿ ‘ಸಂಗೀತ ಮಾರ್ತಾಂಡ್ ಪಂಡಿತ್ ಜಸರಾಜ್’ ಎಂಬ ಪ್ರಸಿದ್ಧ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದರು. 2010ರಲ್ಲಿ ‘ಆಯಿ ತುಜಾ ಆಶೀರ್ವಾದ್’ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಕಂಠ ದಾನ ಮಾಡಿದ್ದರು.

ಮಧುರಾ ಅವರು 78ನೇ ವಯಸ್ಸಿನಲ್ಲಿ ಮೊದಲ ಹಿಂದಿ ಚಲನಚಿತ್ರವನ್ನು ನಿರ್ದೇಶಿಸುವ ನಿರ್ಧಾರವನ್ನು ಪ್ರಕಟಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಜತೆಗೆ ಮಧುರಾ ಅವರು ತಂದೆಯ ಜೀವನಚರಿತ್ರೆಗಳಾದ ‘ಶಾಂತಾರಾಮ್’ (ಮರಾಠಿ) ಮತ್ತು ‘ವಿ. ಶಾಂತಾರಾಮ್: ದಿ ಮ್ಯಾನ್ ಹೂ ಚೇಂಜ್ಡ್ ಇಂಡಿಯನ್ ಸಿನಿಮಾ’ (ಇಂಗ್ಲಿಷ್‌) ಬರೆದು ಗಮನ ಸೆಳೆದಿದ್ದರು.

ಮಧುರಾ 1962ರಲ್ಲಿ ಪಂಡಿತ್ ಜಸರಾಜ್ ಅವರನ್ನು ವಿವಾಹವಾಗಿದ್ದರು. ಅವರಿಗೆ ಶರಂಗ್ ದೇವ್ ಪಂಡಿತ್ ಮತ್ತು ದುರ್ಗಾ ಜಸರಾಜ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT