ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಂಗಭೂಮಿಗೆ ಮಹೇಶ್‌ ಬಾಬು ಮಗ

Published 6 ಜುಲೈ 2024, 4:45 IST
Last Updated 6 ಜುಲೈ 2024, 4:45 IST
ಅಕ್ಷರ ಗಾತ್ರ

ಗೌತಮ್‌ ನನ್ನ ಹೆಮ್ಮೆ, ನಾನಂದುಕೊಂಡಿದ್ಕಕ್ಕಿಂತಲೂ ಗಂಭೀರವಾಗಿ ಬೆಳೆದಿದ್ದಾನೆ ಎಂದು ಮಹೇಶ್‌ ಬಾಬು ತಮ್ಮ ಮಗನ ಬಗ್ಗೆ ಹಾಡಿಹೊಗಳಿದ್ದಾರೆ. 

ನಮೃತಾ ಶಿರೋಡ್ಕರ್‌ ಈಚೆಗೆ ತಮ್ಮ ಮಗಳೊಟ್ಟಿಗೆ ಲಂಡನ್‌ ಪ್ರವಾಸ ಕೈಗೊಂಡಿದ್ದರು. ಅವರ ಹದಿಹರೆಯದ ಮಗ ಗೌತಮ್‌ ರಂಗಭೂಮಿಯಲ್ಲಿ ಮೊದಲ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಮಗಳು ಸಿತಾರಾ ಜೊತೆಗೆ ಲಂಡನ್‌ ಹೋಗಿದ್ದರು.  

ಇದೇ ಸಂದರ್ಭದಲ್ಲಿ ತಮ್ಮ ಸ್ನೇಹಿತೆ ಟ್ವಿಂಕಲ್‌ ಖನ್ನಾ ಅವರನ್ನೂ ಭೇಟಿ ಮಾಡಿ, ಲಂಡನ್‌ ಸುತ್ತಾಡಿದ್ದಾರೆ. ಲಂಡನ್‌ ಮ್ಯಾಜಿಕ್‌ ಎಂದು ಹೆಸರಿಸಿ ಹಲವಾರು ಚಿತ್ರಗಳನ್ನೂ ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮಹೇಶ್‌ ಬಾಬು, ಮಗನ ನಟನೆಯನ್ನು ನೋಡಿ, ಮೆಚ್ಚಿಕೊಂಡು ಮಾತಾಡಿದ್ದಾರೆ. ನನಗಿಂತ ಎತ್ತರವೆನಿಸುವ ಗೌತಮ, ಈ ಕ್ಷೇತ್ರದಲ್ಲಿ ನನಗಿಂತಲೂ ಎತ್ತರದಲ್ಲಿ ಬೆಳೆಯುತ್ತಾನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಲಂಡನ್‌ನಲ್ಲಿ ಉನ್ನತ ಅಧ್ಯಯನ ಕೈಗೊಂಡಿರುವ ಟ್ವಿಂಕಲ್‌ ಖನ್ನಾ ತಮ್ಮ ಓದಿನ ನಡುವೆ ಸಮಯ ಮಾಡಿಕೊಂಡು, ಹಳೆಯ ಸ್ನೇಹಿತೆ ನಮೃತಾ ಜೊತೆಗೆ ಸಾಕಷ್ಟು ಸಮಯವನ್ನೂ ಕಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT