ರೂಪದರ್ಶಿ ಮಲೈಕಾ ಆರೋರಾವೃತ್ತಿ ಜೀವನಕ್ಕಿಂತ ವೈಯಕ್ತಿಕ ಜೀವನದಿಂದಾಗಿ ಬಾಲಿವುಡ್‌ನಲ್ಲಿ ಹೆಚ್ಚು ಸುದ್ದಿಯಲ್ಲಿರುವ ನಟಿ. ನಟ ಅರ್ಬಾಜ್ ಖಾನ್ ಜತೆ ಡೈವೋರ್ಸ್ ಪಡೆದಿರುವ ಮಲೈಕಾ ಕಳೆದ ಕೆಲವು ವರ್ಷಗಳಿಂದ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಜತೆ ಹೆಚ್ಚು ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದವರು. ಇವರಿಬ್ಬರ ಮದುವೆ ಬಗ್ಗೆ ಬಾಲಿವುಡ್‌ನಲ್ಲಿ ಗಾಸಿಪ್‌ಗಳು ಹರಿದಾಡುತ್ತಲೇ ಇವೆ.

ಹೊಸ ವರ್ಷದಲ್ಲಿ ಅರ್ಜುನ್–ಮಲೈಕಾ ಮದುವೆಯಾಗುತ್ತಾರೆ ಎಂಬ ಸುದ್ದಿ ಈಗ ಬಲವಾಗಿದೆ. ಈ ಬಗ್ಗೆ ಕೇಳಿದಾಗ ಮಲೈಕಾ ಉತ್ತರ ನೀಡಿದ್ದು ಹೀಗೆ...‘ ಮದುವೆ ಬಗ್ಗೆ ಯಾರೋಬ್ಬರು ಭವಿಷ್ಯ ನುಡಿಯಲು ಸಾಧ್ಯವಿಲ್ಲ. ಆದರೆ, ನಾನು ಮತ್ತು ಅರ್ಜುನ್ ಇಬ್ಬರೂ ಏಕಕಾಲಕ್ಕೆ ಒಂದೇ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ.

ತಮಗಿಂತಲೂ ವಯಸ್ಸಿನಲ್ಲಿ ಸಾಕಷ್ಟು ಚಿಕ್ಕವರಾಗಿರುವ ಅರ್ಜುನ್ ಮತ್ತು ತಮ್ಮ ನಡುವಿನ ಸಂಬಂಧದ ಬಗ್ಗೆ ಮಲೈಕಾ ಹೆಮ್ಮೆಯಿಂದ ಮಾತನಾಡಿದ್ದಾರೆ. ಸದ್ಯ ನಮ್ಮ ನಡುವಿನ ಸಂಬಂಧದ ಬಗ್ಗೆ ಇಬ್ಬರಿಗೂ ಗೌರವವಿದೆ. ಮುಂದಿನ ಹೆಜ್ಜೆಗಳ ಬಗ್ಗೆ ಕಾಲ ಬಂದಾಗ ತಿಳಿಸುತ್ತೇವೆ ಎಂದಿದ್ದಾರೆ. ಬೀಚ್‌ನಲ್ಲಿ ಬಿಳಿ ಗೌನು ತೊಟ್ಟು ಮದುವೆಯಾಗುವ ಕನಸು ಬಿಚ್ಚಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.