ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಬಾಂಗ್‌ 3’ನಲ್ಲಿ ಮಲೈಕಾ ಇಲ್ಲ!

Last Updated 21 ಜುಲೈ 2019, 19:30 IST
ಅಕ್ಷರ ಗಾತ್ರ

ಸಲ್ಮಾನ್‌ ಖಾನ್‌ ಹಾಗೂ ಅವರ ಸಹೋದರ ಅರ್ಬಾಜ್‌ ಖಾನ್‌ ತಮ್ಮ ಮುಂದಿನ ಚಿತ್ರ ದಬಾಂಗ್‌ 3 ಬಗ್ಗೆ ಘೋಷಣೆ ಮಾಡಿದ್ದಾರೆ. ದಬಾಂಗ್‌ ಸರಣಿ ಚಿತ್ರದ ಎಲ್ಲಾ ಕಲಾವಿದರು ಈ ಚಿತ್ರದಲ್ಲಿಯೂ ಮುಂದುವರಿಯಲಿದ್ದಾರೆ.

ಆದರೆ ಮಲೈಕಾ ಆರೋರಾ ಖಾನ್‌ ಅವರು ಈ ಚಿತ್ರದಲ್ಲಿ ನಟಿಸಲಿದ್ದಾರೆಯೇ ಎಂದು ಅಭಿಮಾನಿಗಳು ಪ್ರಶ್ನೆಗಳು ಕೇಳುತ್ತಿದ್ದರು. ಈಗ ಇದಕ್ಕೆ ಮಲೈಕಾ ಅವರೇ ಸ್ಪಷ್ಟನೆ ನೀಡಿದ್ದು, ನಾನು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ, ಈ ಚಿತ್ರಕ್ಕೆ ಶುಭಾಶಯಗಳು ಎಂದು ಉತ್ತರಿಸಿದ್ದಾರೆ.

ದಬಾಂಗ್‌ ಚಿತ್ರದ ಮುನ್ನಿ ಬದ್ನಾಮ್‌ ಹುಯಿ ಹಾಡು ಬಿಡುಗಡೆಯಾದ ದಿನವೇ ರಾತ್ರೋರಾತ್ರಿ ಬಾರಿ ಫೇಮಸ್‌ ಆಗಿತ್ತು. ಹಾಗೇ ದಬಾಂಗ್‌ 2 ಫೇವಿಕಾಲ್‌ ಸೆ ಹಾಡು ಸಾಕಷ್ಟು ಸುದ್ದಿ ಮಾಡಿತ್ತು. ಚಿತ್ರ ಬಿಡುಗಡೆಯಾಗಿ ವರ್ಷಗಳು ಉರುಳಿದರೂ ಈ ಹಾಡುಗಳು ಈಗಲೂ ಅಷ್ಟೇ ಖ್ಯಾತಿ ಪಡೆದಿವೆ. ಈ ಹಾಡುಗಳಲ್ಲಿ ಮಲೈಕಾ ಅರೋರ ಖಾನ್‌ ಹಾಗೂ ಕರೀನಾ ಕಪೂರ್‌ ನಟಿಸಿದ್ದರು. ಈ ಹಾಡುಗಳೇ ಚಿತ್ರದ ಮುಖ್ಯ ಆಕರ್ಷಣೆಯೂ ಆಗಿತ್ತು. ಹಾಗಾಗಿ ದಬಾಂಗ್‌ 3ನಲ್ಲಿ ಐಟಂ ಹಾಡು ಇರುತ್ತದೆಯೇ ? ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಉಂಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT