ಭಾನುವಾರ, ಸೆಪ್ಟೆಂಬರ್ 26, 2021
21 °C

‘ಮಲಾಂಗ್’ ಹಿಂದಿ ಸಿನಿಮಾ ಮೀಮ್ಸ್‌ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅದಿತ್ಯ ರಾಯ್ ಕಪೂರ್‌ ಹೆಗಲ ಮೇಲೆ ಕೂತು ಮುಂದಕ್ಕೆ ಬಾಗಿ ತುಟಿಗೆ ಮುತ್ತು ಕೊಡುವ ದಿಶಾ ಪಟಾನಿ.. ಮಲಾಂಗ್ ಸಿನಿಮಾದ ಈ ಪೋಸ್ಟರ್‌ ವೈರಲ್ ಆಗಿತ್ತು. ಈಗ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಕೆಲವೇ ದಿನದಲ್ಲಿ ಟ್ರೇಲರ್‌ ವಿಡಿಯೊ ಹಾಗೂ ಅಲ್ಲಿನ ಡೈಲಾಗ್‌ಗಳು ಜನಪ್ರಿಯಗೊಳ್ಳುತ್ತಿವೆ.

ಟ್ರೇಲರ್‌ನಲ್ಲಿ ಇರುವ ‘ಅಭಿ ತೋ ಬೊಹತ್ ಕುಚ್ ಹೋನಾ ಬಾಕಿ ಹೈ’, ‘ಮರ್ಡರ್‌ ರಿಪೋರ್ಟ್‌ ಕರ್ನಾಹೈ ಸರ್’  ಡೈಲಾಗ್‌ ಮೇಲೆ ಸಾಕಷ್ಟು ಮೀಮ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆಫೀಸ್‌ಗೆ ತಡವಾಗಿ ಹೋದರೆ, ನಮ್ಮ ಬಾಸ್‌ಗೆ ಈ ಡೈಲಾಗ್‌ ಹೇಳುತ್ತೇನೆ ಎಂಬ ಮೀಮ್‌, ರಾತ್ರಿ ಪಾರ್ಟಿ ಮಾಡಿ ಬೆಳಿಗ್ಗೆ ಬೇಗ ಹೋಗಲು ಸಾಧ್ಯವಾಗದಾಗ ‘ಅಭಿ ತೋ ಬೊಹತ್ ಕುಚ್ ಹೋನಾ ಬಾಕಿ ಹೈ’ ಎನ್ನುವ ಮೀಮ್‌ಗಳು ಎಲ್ಲೆಡೆ ಹರಿದಾಡುತ್ತಿವೆ.

ಹಸಿಬಿಸಿ, ಆ್ಯಕ್ಷನ್ ದೃಶ್ಯಗಳು ಟ್ರೈಲರ್‌ನಲ್ಲಿ ತುಂಬಿವೆ. ದಿಶಾ ಪಟಾನಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಮುದ್ರದಂಡೆಯಲ್ಲಿ ಅದಿತ್ಯ–ದಿಶಾ ಕೂತು ಬಾಂಗ್‌ ಸೇದುವ ದೃಶ್ಯಗಳು ಜನಪ್ರಿಯಗೊಳ್ಳುತ್ತಿವೆ. ಸಿನಿಮಾದಲ್ಲಿ ಆದಿತ್ಯ ರಾಯ್ ಕಪೂರ್, ದಿಶಾ ಪಟಾನಿ, ಅನಿಲ್ ಕಪೂರ್, ಕುನಾಲ್ ಕೆಮ್ಮು ಅಭಿನಯಿಸಿದ್ದಾರೆ. ಮೋಹಿತ್ ಸೂರಿ ನಿರ್ದೇಶಿಸಿದ್ದಾರೆ.

ಅನಿಲ್ ಕಪೂರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಸಂಪೂರ್ಣ ಆ್ಯಕ್ಷನ್ ಮತ್ತು ರೋಮ್ಯಾಂಟಿಕ್ ದೃಶ್ಯಗಳಿಂದ ಕೂಡಿದೆ. ಯುಟ್ಯೂಬ್‌‌‌ನಲ್ಲಿ ಬಿಡುಗಡೆಯಾಗಿರುವ ಟ್ರೇಲರ್‌ 32 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಪಡೆದುಕೊಂಡಿದೆ. ಫೆಬ್ರವರಿ 7ಕ್ಕೆ ಚಿತ್ರ ಬಿಡುಗಡೆಗೊಳ್ಳಲಿದೆ.

ಸಲ್ಮಾಮ್ ಶಬಾಶ್‌ಗಿರಿ

ಮೋಹಿತ್ ಸೂರಿ ನಿರ್ದೇಶನದ ‘ಮಲಾಂಗ್’ ಸಿನಿಮಾದ ಟ್ರೇಲರ್‌ ನೋಡಿದ ಸಲ್ಮಾನ್‌ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ರೇಲರ್‌ ಲಿಂಕ್‌ ಶೇರ್‌ ಮಾಡಿ ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಸಲ್ಮಾನ್ ‘ಜಕ್ಕಾಸ್‌ ಟ್ರೇಲರ್‌’ ಎಂದು ಉದ್ಘರಿಸಿದ್ದಾರೆ.

ಇದನ್ನೂ ಓದಿ: ಪ್ರಥಮಾರ್ಧದಲ್ಲಿ ಮಿಂಚಿದ ಬಾಲಿವುಡ್‌ ಸುಂದರಿಯರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು