ಶುಕ್ರವಾರ, ಏಪ್ರಿಲ್ 10, 2020
19 °C

ಶೈಲಾಕ್‌ ಭರ್ಜರಿ ಓಪನಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮಲಯಾಳ ಚಿತ್ರರಂಗದ ಸೂಪರ್‌ ಸ್ಟಾರ್‌ ಮಮ್ಮುಟ್ಟಿ ಅಭಿನಯದ ‘ಶೈಲಾಕ್‌‘ ಕೇರಳದಲ್ಲಿ ಭರ್ಜರಿ ಓಪನಿಂಗ್‌ ಕಂಡಿದೆ. ಜನವರಿ 23ರಂದು ವಿಶ್ವದಾದ್ಯಂತ ಬಿಡುಗಡೆಯಾದ ಆ್ಯಕ್ಷನ್‌ ಕಾಮಿಡಿ ಚಿತ್ರ ಮೊದಲ ದಿನವೇ ₹5 ಕೋಟಿ ಬಾಚಿಕೊಂಡಿದೆ. ಒಟ್ಟಾರೆ ನಾಲ್ಕು ದಿನದಲ್ಲಿ ಚಿತ್ರದ ಗಳಿಕೆ ₹20 ಕೋಟಿ ಗಡಿ ತಲುಪಿದೆ. 

ಚಿತ್ರ ಅಜಯ್‌ ವಾಸುದೇವ ಆ್ಯಕ್ಷನ್‌ ಕಟ್‌ ಹೇಳಿರುವ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಹತ್ತಕ್ಕೆ 7.4 ಅಂಕ ದೊರೆತಿವೆ.  ಮಮ್ಮುಟ್ಟಿ ಜತೆ ತಮಿಳು ಚಿತ್ರರಂಗದ ರಾಜ್‌ ಕಿರಣ್‌ ಮತ್ತು ಮೀನಾ ಕೂಡ ನಟಿಸಿದ್ದಾರೆ. ಬಿಬಿನ್‌ ಜಾರ್ಜ್‌ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ದಿಕಿ, ಬೈಜು ಸಂತೋಷ್‌, ಕಲಾಭವನ್‌ ಶಾಜಾನ್‌, ಅಜಯ್‌ ವಾಸುದೇವ, ಜಾನ್‌ ವಿಜಯ್‌ ಹರೀಶ್‌ ಕನರನ್‌ ಪಾತ್ರಗಳು ಮನದಲ್ಲಿ ಉಳಿಯುತ್ತವೆ. ತಮಿಳು ಭಾಷೆಯಲ್ಲೂ ಈ ಚಿತ್ರ ಬಿಡುಗಡೆಯಾಗಿದ್ದು ಚೆನ್ನೈ, ವೆಲ್ಲೂರುಗಳಲ್ಲಿ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)