ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಂಗಳ’ಯಾನ ವೆಬ್‌ ಸರಣಿಯಲ್ಲಿ ಕಾವ್ಯಶಾಸ್ತ್ರಿ

Last Updated 11 ಜೂನ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

‘ಬಂದ್ರಾ ತಗೋಳಿ, ನಾಣ್ಯ ಕೊಡಿ ವಾಪಾಸ್, ಅದೇನ್ ಒಳ್ಳೇದಾಗುತ್ತೋ ನೋಡೋಣ’,
‘ಇವರೆಲ್ಲ ಯಾಕ್ ಕೆಲಸ ಮಾಡಲ್ಲ? ಭಿಕ್ಷೆ ಬೇಡಿದ್ರೆ ದುಡ್ಡು ಜಾಸ್ತಿ ಬರುತ್ತೆ ಅಂತ ಇರ್ಬೇಕು’,
‘ಪಾಪ ಇವ್ರು ಕೆಲಸ ಮಾಡೋಣ ಅಂದ್ರು ಯಾರು ಕೆಲಸ ಕೊಡಲ್ಲ’,
‘ಹೇ ದುಡ್ಡು ಇಲ್ಲ ಏನೂ ಇಲ್ಲ ಹೋಗು ಮುಂದೆ ಹೋಗು’.

– ಇಂಥ ಸಂಭಾಷಣೆಗಳು ನಿತ್ಯ ರೈಲುಗಾಡಿಯಲ್ಲಿ ಮತ್ತು ಬಸ್‌ ನಿಲ್ದಾಣಗಳಲ್ಲಿ, ರಸ್ತೆಯಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ ಕೇಳಿಯೇ ಕೇಳಿರುತ್ತೀರಿ. ನಮ್ಮ ಸಮಾಜ ಮಂಗಳಮುಖಿಯರನ್ನು ನೋಡುವ, ನಡೆಸಿಕೊಳ್ಳುವ ರೀತಿಯನ್ನು ಈ ಮೇಲಿನ ಸಂಭಾಷಣೆಗಳೇ ಹೇಳುತ್ತದೆ.

ಮಂಗಳಮುಖಿಯರ ಬದುಕಿನ ಚಿತ್ರಣವನ್ನು ‘ಮಂಗಳ’ ವೆಬ್ ‌ಸರಣಿಯಾಗಿಸಿಪ್ರೇಕ್ಷಕರ ಮುಂದಿಡಲು ಸಜ್ಜಾಗಿದ್ದಾರೆ ಯುವ ನಿರ್ದೇಶಕಯುವ ನಿರ್ದೇಶಕ ಪೃಥ್ವಿ ಕುಣಿಗಲ್. ಈ ಸರಣಿಯಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುವ ಮೂಲಕ ನಟಿ, ನಿರೂಪಕಿ ಕಾವ್ಯಶಾಸ್ತ್ರಿ ಕೂಡ ವೆಬ್‌ ಸರಣಿಗೆ ಅಡಿ ಇಟ್ಟಿದ್ದಾರೆ.

ನಿನ್ನೆಯಷ್ಟೇ(ಸೋಮವಾರ) ಅವರ ಹುಟ್ಟುಹಬ್ಬ. ಇದರ ನಿಮಿತ್ತ ‘ಮಂಗಳ’ ವೆಬ್‌ಸರಣಿಯ ತಂಡ ಪೋಸ್ಟರ್‌ ಬಿಡುಗಡೆ ಮಾಡಿ, ಕಾವ್ಯಶಾಸ್ತ್ರಿಯವರಿಗೆ ಜನ್ಮದಿನ ಕಾಣಿಕೆ ನೀಡಿದೆ.ಈ ಪೋಸ್ಟರ್‌ಗೆ ಚಿತ್ರರಂಗದ ಗಣ್ಯರಿಂದ ಒಳ್ಳೆಯ ಪ್ರತಿಕ್ರಿಯೆಯೂ ಬಂದಿದೆಯಂತೆ. ಶೀಘ‍್ರದಲ್ಲೇ ಒಟಿಟಿ ವೇದಿಕೆಗಳಲ್ಲಿ ‘ಮಂಗಳ’ಯಾನ ವೆಬ್‌ಸರಣಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಮಂಗಳಮುಖಿಯರ ಬಗ್ಗೆಯೇ ಯಾಕೆ ವೆಬ್ ಸರಣಿ ಮಾಡಲು ನಿರ್ಧರಿಸಲಾಯಿತು? ಇದರಲ್ಲಿ ಯಾರೆಲ್ಲ ನಟಿಸಿದ್ದಾರೆ ಎಂಬ ಪ್ರಶ್ನೆಗಳಿಗೆ ಪೃಥ್ವಿ ಇಲ್ಲಿ ಉತ್ತರಿಸಿದ್ದಾರೆ.

‘ನನ್ನಬಾಲ್ಯದ ಜೀವನ ಅಷ್ಟು ಸುಲಭವಾಗಿರಲಿಲ್ಲ. ಮನೆಯ ಆರ್ಥಿಕ ಪರಿಸ್ಥಿತಿಯಿಂದ ಓದುವುದು ಕೂಡ ಕಷ್ಟವೇ ಆಗಿತ್ತು. ಆದರೆ ನನಗೆ ಸಹಾಯ ಹಸ್ತ ಚಾಚಿದ್ದು ಮತ್ತ್ಯಾರು ಅಲ್ಲ ಅವರೊಬ್ಬರು ಮಂಗಳಮುಖಿ. ನನ್ನನ್ನು ಕಂಡ ಕೂಡಲೇ ಪ್ರತಿ ಬಾರಿಯೂ ₹100 ಕೈಗಿಟ್ಟು ತೆರಳುತ್ತಿದ್ದರು. ನನಗೆ ಯಾಕೆ ದುಡ್ಡು ಕೊಡುತ್ತಾರೆ ಎಂಬುದರ ಅರಿವು ಇಲ್ಲದೇ, ಆ ಮಂಗಳಮುಖಿಯೊಬ್ಬರು ನೀಡುತ್ತಿದ್ದ ದುಡ್ಡನ್ನು ಪುಸ್ತಕಗಳನ್ನು ಖರೀದಿಸಲು ಹಾಗೂ ಶಿಕ್ಷಣದ ಇತರ ಖರ್ಚುಗಳನ್ನು ನಿಭಾಯಿಸಲು ಬಳಸುತ್ತಿದ್ದೆ. ನನಗೆ ಸಹಾಯ ಮಾಡಿದ್ದ ಮಂಗಳಮುಖಿಯರನ್ನು ಸಮಾಜ ನೋಡುವ ದೃಷ್ಟಿ ಬದಲಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಈ ಕಥೆ ರಚಿಸಿದ್ದೇನೆ’ ಎನ್ನುವ ಸಂಗತಿ ತೆರೆದಿಟ್ಟರು ಪೃಥ್ವಿ.

ಮಂಗಳಮುಖಿಯರ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳು ಹಾಗೂ ಸಮಾಜ ಅವರನ್ನು ಕಾಣುವ ಬಗೆಯನ್ನು ಈ ಸರಣಿಯಲ್ಲಿ ಅನಾವರಣವಾಗಲಿದೆ.‘ಛೇ ಬಂದ್ರು, ಸ್ವಲ್ಪ ದುಡ್ಡು ಕೊಟ್ಟು ಕಳ್ಸೋಣ ಮೊದಲು’ಎನ್ನುವ ಮನೋಭಾವನೆಯನ್ನು ಬದಲಾಯಿಸಲಿದೆ ಈ ‘ಮಂಗಳ’ ಎನ್ನುವುದು ಅವರ ನಿರೀಕ್ಷೆ.

‘ಮಜಾಭಾರತ’ ಖ್ಯಾತಿಯ ರಾಘವೇಂದ್ರ ಮತ್ತು ಮಂಜು ಪಾವಗಡ ಹಾಗೂ ಅಮೃತಾ ಶೆಟ್ಟರ್‌ ಮಂಗಳಮುಖಿಯರ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟಿ– ನಿರೂಪಕಿ ಕಾವ್ಯ ಶಾಸ್ತ್ರಿಯವರದು ಪತ್ರಕರ್ತೆಯ ಪಾತ್ರ. ಕೆಜಿಎಫ್‌, ಅವನೇ ಶ್ರೀಮನ್ನಾರಾಯಾಣ, ಮುಂದುವರಿದ ಅಧ್ಯಾಯ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ವಿನಯ್‌ ಕೃಷ್ಣಸ್ವಾಮಿ ಈ ವೆಬ್‌ ಸರಣಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಅವರದು ರಾಜಕೀಯ ಮುಖಂಡನ ಪಾತ್ರ. ಇವರ ಪಾತ್ರದ ಸುತ್ತವೇ ಕಥೆ ನಡೆಯುತ್ತದೆ. ಇದೊಂದು ಥ್ರಿಲ್ಲರ್‌ ಕಥಾವಸ್ತು.

ಛಾಯಾಗ್ರಹಣ ಆನಂದ್ ಸುಂದರೇಶ, ಕಲಾ ನಿರ್ದೇಶನ ಸತೀಶ್, ಸಾಹಿತ್ಯ– ಸಂಭಾಷಣೆ ಪ್ರಮೋದ್ ಮರವಂತೆ,ಸಂಗೀತ ನಿರ್ದೇಶನ ಮುಂಬೈನ ಮಯೂರೇಶ್, ಸಂಕಲನ ಮಹೇಶ್ ತೊಗಟ ಅವರದು.

‘ಮಂಗಳ’ ಚಿತ್ರದ ಪೋಸ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT