ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಾಯಕನಾಗಿ ನಟಿಸಿರುವ 'ಮ್ಯಾಂಗೋ ಪಚ್ಚ' ಚಿತ್ರದ 'ಅರಗಿಣಿಯೇ' ಹಾಡು ಬಿಡುಗಡೆಗೊಂಡಿದೆ. ಈ ಹಾಡು 2.5 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಮೆಚ್ಚುಗೆ ಗಳಿಸುತ್ತಿದೆ.

ಈಗ ಕೆಆರ್ಜಿ ಸ್ಟುಡಿಯೊ ಹಾಡಿನ ಮೇಕಿಂಗ್ ವಿಡಿಯೊವನ್ನು ಹಂಚಿಕೊಂಡಿದೆ. ‘ಮ್ಯಾಂಗೋ ಪಚ್ಚ’ ಚಿತ್ರದ ಅರಗಿಣಿಯೇ ಹಾಡು ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ, ನಿಮ್ಮ ಬೆಂಬಲ ಇರಲಿ’ ಎಂದು ಸಾನ್ವಿ ಸುದೀಪ್ ವಿಡಿಯೊದಲ್ಲಿ ಹೇಳಿದ್ದಾರೆ.
.Sandalwood: ‘ಮ್ಯಾಂಗೋ ಪಚ್ಚ’ ಚಿತ್ರದ ಅರಗಿಣಿಯೇ ಹಾಡಿಗೆ ಸಾನ್ವಿ ಸುದೀಪ್ ಧ್ವನಿ.ಸುದೀಪ್ ಸೋದರಳಿಯನ ಚಿತ್ರದ ಅರಗಿಣಿಯೇ.. ಹಾಡಿಗೆ ಸಾನ್ವಿ ಧ್ವನಿ: ನಾಳೆ ಬಿಡುಗಡೆ.
ಅರಗಿಣಿಯೇ ಹಾಡಿಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡು ಸಾನ್ವಿ ಸುದೀಪ್ ಕಂಠದಲ್ಲಿ ಮೂಡಿ ಬಂದ ಎರಡನೇ ಹಾಡಗಿದೆ. ಈ ಮೊದಲು ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾದಲ್ಲಿ ‘ಮಸ್ತ್ ಮಲೈಕಾ’ ಹಾಡನ್ನು ಹಾಡಿದ್ದರು. ಈ ಹಾಡು ಹೆಚ್ಚು ಜನಪ್ರಿಯತೆಯನ್ನೂ ಗಳಿಸಿದೆ.

ಅರಗಿಣಿಯೇ ಹಾಡು ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ಸಾನ್ವಿ ಸುದೀಪ್ ಮತ್ತು ಕಪಿಲ್ ಕಪಿಲನ್ ಧ್ವನಿ ಹಾಗೂ ಧನಂಜಯ ರಂಜನ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.