ಮತ್ತೆ ನಿರ್ದೇಶನಕ್ಕಿಳಿದ ಮಣಿರತ್ನಂ; ಐಶ್ವರ್ಯ, ವಿಕ್ರಮ್ ನಟನೆ

ಭಾನುವಾರ, ಜೂಲೈ 21, 2019
28 °C

ಮತ್ತೆ ನಿರ್ದೇಶನಕ್ಕಿಳಿದ ಮಣಿರತ್ನಂ; ಐಶ್ವರ್ಯ, ವಿಕ್ರಮ್ ನಟನೆ

Published:
Updated:
Prajavani

ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಮೆಗಾ ಬಜೆಟ್‌ ಸಿನಿಮಾವೊಂದಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರದಲ್ಲಿ ಐಶ್ವರ್ಯಾ ರೈ ಹಾಗೂ ಅಮಿತಾಭ್‌ ಬಚ್ಚನ್‌ ನಟಿಸುತ್ತಿದ್ದಾರೆ. ಖ್ಯಾತ ನಟ ವಿಕ್ರಮ್‌ ಈ ಚಿತ್ರದ ನಾಯಕ ಪಾತ್ರ ನಿರ್ವಹಿಸಲಿದ್ದಾರೆ. 

ಈ ಚಿತ್ರದಲ್ಲಿ ತಾನು ನಟಿಸುತ್ತಿದ್ದೇನೆ ಎಂದು ಐಶ್ವರ್ಯಾ ರೈ ಘೋಷಿಸಿಕೊಂಡಿದ್ದರು. ನಟ ವಿಕ್ರಮ್‌ ಕೂಡ ಮಣಿರತ್ನಂ ಅವರ ಜೊತೆ ಮತ್ತೆ ಕೆಲಸ ಮಾಡುವ ಅವಕಾಶ ಒದಗಿ ಬಂದಿದೆ. ಅವರ ಮುಂದಿನ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 

ಈ ಹಿಂದೆ ವಿಕ್ರಮ್ ಮತ್ತು ಮಣಿರತ್ನಂ ‘ರಾವಣನ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಚಿತ್ರದಲ್ಲೂ ಐಶ್ವರ್ಯಾ ರೈ ಬಚ್ಚನ್‌ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರ ಹಿಂದಿ, ತೆಲುಗು, ತಮಿಳಿನಲ್ಲಿ ಬಿಡುಗಡೆಯಾಗಿತ್ತು. 

ಲೈಕಾ ಪ್ರೊಡಕ್ಷನ್ಸ್‌ ನಿರ್ಮಾಣದ ಈ ಹೊಸ ಚಿತ್ರ ತಮಿಳಿನ ಐತಿಹಾಸಿಕ ಕಾದಂಬರಿ ‘ಪೊನ್ನಿಯಿನ್‌ ಸೆಲ್ವಂ’ ಆಧರಿಸಿದೆ. ವಿಕ್ರಮ್‌ ಇದರಲ್ಲಿ ಆದಿತ್ಯ ಕರಿಕಾಲನ್‌ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅಮಿತಾಭ್‌ ಬಚ್ಚನ್‌, ಸತ್ಯರಾಜ್‌, ಜಯಂ ರವಿ, ಕೀರ್ತಿ ಸುರೇಶ್‌, ಕಾರ್ತಿ ಕೂಡ ಅಭಿನಯಿಸಲಿದ್ದಾರೆ.

Post Comments (+)