ಸೋಮವಾರ, ಡಿಸೆಂಬರ್ 5, 2022
24 °C

ವಿಮರ್ಶಕ ಉಮೈರ್‌ಗೆ ಸುಹಾಸಿನಿ ತರಾಟೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಪೊನ್ನಿಯಿನ್‌ ಸೆಲ್ವನ್‌ ಚಿತ್ರದ ಕುರಿತು ಉಮೈರ್‌ ಸಂಧು ಹಾಕಿರುವ ವಿಮರ್ಶೆಗೆ ಮಣಿರತ್ನಂ ಪತ್ನಿ ಹಾಗೂ ಖ್ಯಾತ ನಟಿ ಸುಹಾಸಿನಿ ಕಿಡಿಕಾರಿದ್ದಾರೆ. ಉಮೈರ್‌ ಟ್ವೀಟ್‌ ಮಾಡಿರುವ ವಿಮರ್ಶೆಗೆ ಪ್ರತಿಕ್ರಿಯಿಸಿರುವ ಸುಹಾಸಿನಿ, ಇದೊಂದು ನಕಲಿ ವಿಮರ್ಶೆ ಎಂಬುದಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. 

ಚಿಯಾನ್‌ ವಿಕ್ರಂ, ಐಶ್ವರ್ಯಾ ರೈ ಬಚ್ಚನ್‌, ಕಾರ್ತಿ, ಜೈರಾಂ ರವಿ ಮೊದಲಾದ ಸ್ಟಾರ್‌ಗಳಿರುವ ಚಿತ್ರ ಸೆ.30ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸಾಗರೋತ್ತರ ಸಿನಿಮಾ ವಿಮರ್ಶಕರೆಂದು ತಮ್ಮನ್ನು ತಾವು ಬಿಂಬಿಸಿಕೊಂಡಿರುವ ಉಮೈರ್‌, ಸೆ.27ರಂದೇ ಪೊನ್ನಿಯನ್‌ ಚಿತ್ರದ ಕುರಿತು ವಿಮರ್ಶೆ ಬರೆದಿದ್ದರು. ಪೊನ್ನಿಯಿನ್‌ ಅದ್ಬುತ ಸಿನಿಮಾ ಎಂದು ಬಣ್ಣಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಸುಹಾಸಿನಿ, ‘ದಯವಿಟ್ಟು ಇದು ಯಾರು ಹೇಳಿ. ಇನ್ನೂ ಬಿಡುಗಡೆಯಾಗದ ಚಿತ್ರ ನಿಮಗೆಲ್ಲಿ ನೋಡಲು ಸಿಕ್ಕಿದೆ’ ಎಂಬುದಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸುಹಾಸಿನಿ ಅವರ ಈ ದಿಟ್ಟ ನಡೆಯನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಚಿತ್ರ ಶುಕ್ರವಾರ 5 ಭಾಷೆಗಳಲ್ಲಿ ತೆರೆಗೆ ಬರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು