ಬುಧವಾರ, ಅಕ್ಟೋಬರ್ 20, 2021
25 °C

ಜಾಕ್ವೆಲಿನ್ ಫೆರ್ನಾಂಡಿಸ್ ಭೇಟಿ ಮಾಡಿದ ಮನಿಕೆ ಮಗೆ ಹಿತೆ ಖ್ಯಾತಿಯ ಯೋಹನಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Yohani Instagram Post

ಬೆಂಗಳೂರು: ಮನಿಕೆ ಮಗೆ ಹಿತೆ ಶ್ರೀಲಂಕಾ ಹಾಡಿನ ಮೂಲಕ ಜನಪ್ರಿಯತೆ ಗಳಿಸಿರುವ ಗಾಯಕಿ ಯೋಹನಿ, ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರನ್ನು ಭೇಟಿ ಮಾಡಿದ್ದಾರೆ.

ಜಾಕ್ವೆಲಿನ್ ಫೆರ್ನಾಂಡಿಸ್ ಅವರು ಮಾಜಿ ಮಿಸ್ ಶ್ರೀಲಂಕಾ ಆಗಿದ್ದು, ಬಾಲಿವುಡ್ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಗಾಯಕಿ ಯೋಹನಿ ಅವರು ಮನಿಕೆ ಮಗೆ ಹಿತೆ ಕವರ್ ಹಾಡಿನ ಮೂಲಕ ಇಂಟರ್‌ನೆಟ್‌ ಸ್ಟಾರ್ ಅನ್ನಿಸಿಕೊಂಡಿದ್ದಾರೆ.

ಅಲ್ಲದೆ, ಇಬ್ಬರೂ ಶ್ರೀಲಂಕಾ ಮೂಲದವರಾಗಿದ್ದು, ಭಾರತದಲ್ಲಿ ಅಪಾರ ಪ್ರಸಿದ್ಧಿ ಪಡೆದಿದ್ದಾರೆ.

ಜಾಕ್ವೆಲಿನ್ ಜತೆಗಿನ ಫೋಟೊ ಅನ್ನು ಯೋಹನಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೊಗೆ ನಟಿ ಜಾಕ್ವೆಲಿನ್ ಕಮೆಂಟ್ ಮಾಡಿದ್ದು, ನಿನ್ನ ಬಗ್ಗೆ ಹೆಮ್ಮೆಯಿಸುತ್ತಿದೆ ಎಂದಿದ್ದಾರೆ.

ಯೋಹನಿ ಗಾಯನವನ್ನು ಪ್ರಿಯಾಂಕಾ ಚೋಪ್ರಾ ಸಹಿತ ಅನೇಕ ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು