ಐಂದ್ರಿತಾ ರೇ ಜೊತೆಗೆ ಸಪ್ತಪದಿ ತುಳಿದ ಬಳಿಕ ನಟ ದಿಗಂತ್ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ನಟನೆಯ ‘ಯುವರತ್ನ’ ಚಿತ್ರದಲ್ಲೂ ಅವರು ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮತ್ತೆ ಯೋಗರಾಜ್ ಭಟ್ಟರೊಟ್ಟಿಗೆ ಸೇರಿ ‘ಗಾಳಿಪಟ 2’ ಕೂಡ ಹಾರಿಸುತ್ತಿದ್ದಾರೆ. ಈಗ ಕೈಯಲ್ಲಿ ‘ಮಾರಿಗೋಲ್ಡ್’ ಹಿಡಿದು ಸಂಗೀತಾ ಶೃಂಗೇರಿ ಜೊತೆಗೆ ರೊಮ್ಯಾನ್ಸ್‌ಗೂ ಅಣಿಯಾಗಿದ್ದಾರೆ. ಜೊತೆಗೆ, ‘ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರವೂ ಅವರ ಬತ್ತಳಿಕೆಯಲ್ಲಿದೆ.

ರಾಘವೇಂದ್ರ ಎಂ. ನಾಯಕ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದ ಶೂಟಿಂಗ್ ಈಗಾಗಲೇ ಆರಂಭಗೊಂಡಿದೆ. ಕಾಮಿಡಿ, ಕ್ರೈಂ, ಥ್ರಿಲ್ಲರ್ ಚಿತ್ರ ಇದು. ಭಾವುಕತೆಯ ಬಂಧವೂ ಚಿತ್ರದಲ್ಲಿದೆಯಂತೆ. ಆರ್.ವಿ. ಕ್ರಿಯೇಷನ್ಸ್‌ನಡಿ ರಘುವರ್ಧನ್ ಇದಕ್ಕೆ ಬಂಡವಾಳ ಹೂಡಿದ್ದಾರೆ.

ಬೆಂಗಳೂರು, ಶಿವಮೊಗ್ಗ ಹಾಗೂ ಚಿತ್ರದುರ್ಗದ ಸುತ್ತಮುತ್ತ ನಲವತ್ತು ದಿನಗಳ ಕಾಲ ಶೂಟಿಂಗ್ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ. ಮೊದಲ ಹಂತದಲ್ಲಿ ಹಾಡುಗಳು ಹಾಗೂ ಮಾತಿನ ಭಾಗದ ಚಿತ್ರೀಕರಣ ನಡೆಯಲು ನಿರ್ಧರಿಸಿದೆ. ರಘುವರ್ಧನ್ ಕೂಡ ನಿರ್ದೇಶಕರಾಗಿದ್ದಾರೆ. ಆದರೆ, ಕಥೆ ಕೇಳಿ ಇಷ್ಟಪಟ್ಟಿದ್ದರಿಂದ ಬೇರೊಬ್ಬ ನಿರ್ದೇಶಕರಿಗೆ ಅವಕಾಶ ನೀಡಿದ್ದಾರಂತೆ.

ರಕ್ಷಿತ್ ಶೆಟ್ಟಿ ನಾಯಕರಾಗಿರುವ ‘777 ಚಾರ್ಲಿ’ ಚಿತ್ರದ ನಾಯಕಿ ಸಂಗೀತಾ ಶೃಂಗೇರಿ ಅವರೇ ಈ ಸಿನಿಮಾಕ್ಕೂ ನಾಯಕಿ. ರಘು ನೀಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ಕೆ.ಎಂ. ಪ್ರಕಾಶ್ ಸಂಕಲನ ನಿರ್ವಹಿಸಿದ್ದಾರೆ. ಚಿತ್ರದ ಎರಡು ಹಾಡುಗಳಿಗೆ ವೀರ್ ಸಮರ್ಥ ಸಂಗೀತ ನೀಡಿದ್ದಾರೆ.

‘ಕಾಕ್ರೋಚ್’ ಸುಧಿ, ‘ಅಥರ್ವ’ ಖ್ಯಾತಿಯ ಯಶ್ ಶೆಟ್ಟಿ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ‘ಕೆಜಿಎಫ್’ ಚಿತ್ರದ ಖ್ಯಾತಿಯ ಸಂಪತ್ ಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.