ಶುಕ್ರವಾರ, ಅಕ್ಟೋಬರ್ 30, 2020
22 °C

ಗಾಂಧಿ ಜಯಂತಿಗೆ ‘ಮ್ಯಾಟ್ನಿ’ಯ ಫಸ್ಟ್‌ಲುಕ್‌ ಹೊರಬಂತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ಯಾಂಡಲ್‌ವುಡ್‌ನ ಅಭಿನಯ ಚತುರ ನೀನಾಸಂ ಸತೀಶ್‌ ನಟನೆಯ ಹೊಸ ಚಿತ್ರದ ಟೈಟಲ್‌ ‘ಮ್ಯಾಟ್ನಿ’. ಈ ಚಿತ್ರದ ಫಸ್ಟ್‌ಲುಕ್‌ ಕೂಡ ಗಾಂಧಿಜಯಂತಿಯಂದು ಬಿಡುಗಡೆಯಾಗಿದೆ. ನವೆಂಬರ್‌ನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗುವ ನಿರೀಕ್ಷೆ ಇದೆ. 

ಈ ಚಿತ್ರಕ್ಕೆ ಮನೋಹರ್ ಕಾಂಪಲ್ಲಿ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಎಸ್‌.ಪಾರ್ವತಿ ಬಂಡವಾಳ ಹೂಡುತ್ತಿದ್ದಾರೆ. ಛಾಯಾಗ್ರಹಣ ಕ್ರಾಂತಿ ವರ್ಲ, ಸಂಗೀತ ನಿರ್ದೇಶನ ವಿ.ಪೂರ್ಣಚಂದ್ರ ತೇಜಸ್ವಿ, ಸಂಕಲನ ಕೆ.ಎಂ. ಪ್ರಕಾಶ್‌ ಅವರದು.

ಇದೊಂದು ಬಿಗ್‌ ಬಜೆಟ್‌ ಸಿನಿಮಾ. ರೊಮ್ಯಾಂಟಿಕ್‌ ಥ್ರಿಲ್ಲರ್‌ ಕಥಾಹಂದರವಿದೆ. ಕಥೆಯೂ ತುಂಬಾ ಚೆನ್ನಾಗಿದೆ. ನಿರ್ದೇಶಕರಿಗೆ ಮೊದಲ ಸಿನಿಮಾ ಆಗಿದ್ದರೂ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವವಿದೆ. ಅವರು ಕಥೆ ಹೇಳಿದ ಶೈಲಿ ನೋಡಿಯೇ ಈ ಸಿನಿಮಾ ಅದ್ಭುತವಾಗಿ ಮಾಡಲಿದ್ದಾರೆ ಎಂದಿದ್ದರು  ನೀನಾಸಂ ಸತೀಶ್‌.

 

ಸತೀಶ್‌ ನಟಿಸಿರುವ ‘ಗೋದ್ರಾ’ ಸಿನಿಮಾ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಇನ್ನು ಶರ್ಮಿಳಾ ಮಾಂಡ್ರೆ ಜತೆಗೆ ತೆರೆ ಹಂಚಿಕೊಂಡಿರುವ ‘ದಸರಾ’ ಸಿನಿಮಾ ಚಿತ್ರೀಕರಣದ ಕೆಲ ಭಾಗದ ಚಿತ್ರೀಕರಣ ಇನ್ನಷ್ಟೇ ನಡೆಯಬೇಕಿದೆ. ಇನ್ನು 2021ರಲ್ಲಿ ‘ಮೈ ನೇಮ್‌ ಈಸ್‌ ಸಿದ್ದೇಗೌಡ’ ಚಿತ್ರಕ್ಕೆ ಸತೀಶ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರಂತೆ.

ಸತೀಶ್‌ ಸದ್ಯ ಎರಡು ತಿಂಗಳಿನಿಂದ ಜಿಮ್‌ನಲ್ಲಿ ದೇಹ ದಂಡಿಸುತ್ತಿದ್ದು, ಗ್ಯಾಂಗ್‌ಸ್ಟರ್‌ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. ಅದಕ್ಕಾಗಿಯೇ ಮೈಕಟ್ಟು ಹುರಿಗೊಳಿಸುತ್ತಿದ್ದಾರಂತೆ. ಆ ಚಿತ್ರ ಯಾವುದೆಂದು ಸದ್ಯಕ್ಕೆ ಬಾಯಿಬಿಡದಿರುವ ಸತೀಶ್‌ ಕುತೂಹಲ ಕಾಯ್ದುಕೊಳ್ಳುವ ಜಾಣ್ಮೆ ತೋರುತ್ತಿದ್ದಾರೆ. ಈ ವರ್ಷಾಂತ್ಯದೊಳಗೆ ಗ್ಯಾಂಗ್‌ಸ್ಟರ್‌ ಪಾತ್ರದ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರಂತೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.