ಬಾಲಿವುಡ್ ಯುವನಟಿ ಜಾಹ್ನವಿ ಕಪೂರ್ ಇನ್ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇಂದು ಜಾಹ್ನವಿ ತಾಯಿ, ಭಾರತೀಯ ಸಿನಿರಂಗದ ಮೇರುನಟಿ ದಿವಂಗತ ಶ್ರೀದೇವಿ ಅವರ 3ನೇ ಪುಣ್ಯತಿಥಿ. ಆ ಕಾರಣಕ್ಕೆ ಫೋಟೊವೊಂದನ್ನು ಹಂಚಿಕೊಂಡು 'ಮಿಸ್ ಯೂ' ಎಂದು ಬರೆದುಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಶ್ರೀದೇವಿ ದುಬೈನ ಹೋಟೆಲ್ವೊಂದರಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದ್ದರು.

‘ಐ ಲವ್ ಯೂ ಮೈ ಲಬ್ಬು, ನೀನು ಜಗತ್ತಿನಲ್ಲೇ ಅತೀ ಒಳ್ಳೆಯ ಮಗು’ ಎಂದು ಚೀಟಿವೊಂದರ ಮೇಲೆ ಬರೆದಿದ್ದರು ಶ್ರೀದೇವಿ. ಅದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಜಾಹ್ನವಿ. ಜಾಹ್ನವಿ ಸಹೋದರಿ ಖುಷಿ ಕೂಡ ತಾಯಿ ಶ್ರೀದೇವಿ ಹಾಗೂ ತಂದೆ ಬೋನಿ ಕಪೂರ್ ಅವರೊಂದಿಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ.

ನಿನ್ನೆ (ಮಂಗಳವಾರ) ಜಾಹ್ನವಿ, ಖುಷಿ ಹಾಗೂ ಬೋನಿ ಕಪೂರ್ ಶ್ರೀದೇವಿ ಪುಣ್ಯತಿಥಿಯ ಸಲುವಾಗಿ ಚೆನ್ನೈನಲ್ಲಿ ಪೂಜೆ ಸಲ್ಲಿಸಿದ್ದರು. 2020ರಲ್ಲಿ ಖುಷಿ ಓದಿನ ಸಲುವಾಗಿ ಅಮೆರಿಕದಲ್ಲಿದ್ದ ಕಾರಣ ತಾಯಿಯ ಕಾರ್ಯದಲ್ಲಿ ಪಾಲ್ಗೊಂಡಿರಲಿಲ್ಲ. ಕಳೆದ ವರ್ಷವೂ ಜಾಹ್ನವಿ ‘ನೀನು ಇಲ್ಲಿರಬೇಕಿತ್ತು’ ಎಂದು ಬರೆದುಕೊಂಡಿದ್ದರು.

‘ಧಡಕ್’ ಸಿನಿಮಾದ ಮೂಲಕ ಸಿನಿಪಯಣವನ್ನು ಆರಂಭಿಸಿದ್ದರು ಜಾಹ್ನವಿ. 2020ರ ಗುಂಜನ್ ಸಕ್ಸೇನಾದಲ್ಲೂ ಮುಖ್ಯಪಾತ್ರದಲ್ಲಿ ನಟಿಸಿದ್ದರು ಈ ಬೆಡಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.