ಗುರುವಾರ , ಮಾರ್ಚ್ 23, 2023
21 °C

ರಶ್ಮಿಕಾ ಅಭಿನಯದ ಹಿಂದಿ ಸಿನಿಮಾ ‘ಮಿಷನ್ ಮಜ್ನು’ 2022ರ ಮೇ 13ಕ್ಕೆ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಾಲಿವುಡ್‌ನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದು ಅವರ  ‘ಮಿಷನ್ ಮಜ್ನು’ ಸಿನಿಮಾ 2022ರ ಮೇ 13ರಂದು ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.

ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು ಡಬ್ಬಿಂಗ್‌ ಹಾಗೂ ಎಡಿಟಿಂಗ್ ಕೆಲಸಗಳು ನಡೆಯುತ್ತಿವೆ ಎಂದು ಚಿತ್ರತಂಡ ಹೇಳಿದೆ.  

ರಶ್ಮಿಕಾ ನಟನೆಯ ಮೊದಲ ಬಾಲಿವುಡ್ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಸಿದ್ಧಾರ್ಥ ಮಲ್ಹೋತ್ರಾ ಅವರಿಗೆ ನಾಯಕಿಯಾಗಿ ರಶ್ಮಿಕಾ ನಟಿಸಿದ್ದಾರೆ.

ಇದು ನನ್ನ ಮೊದಲ ಹಿಂದಿ ಚಿತ್ರ, ಚಿತ್ರೀಕರಣ ಸಮಯದಲ್ಲಿ ನಾನು ತಂಡದೊಂದಿಗೆ ಸಂತಸದ ಸಮಯವನ್ನು ಕಳೆದಿದ್ದೇನೆ. ಸ್ಕ್ರಿಪ್ಟ್ ಕೇಳಿದ ಮೊದಲ ದಿನವೇ ನಾನು ಈ ಚಿತ್ರದ ಭಾಗವಾಗಬೇಕು ಎಂದು ಅನಿಸಿತ್ತು ಎಂದು ರಶ್ಮಿಕಾ ಕೆಲವು ದಿನಗಳ ಹಿಂದೆ ಟ್ವೀಟ್‌ ಮಾಡಿದ್ದರು.

ಶಂತನು ಬಾಗ್ಚಿ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಪರ್ಮೀತ್ ಸೇಠಿ, ಝಾಕಿರ್ ಹುಸೇನ್, ಶರೀಬ್ ಹಷ್ಮಿ ಸೇರಿದಂತೆ ಹಲವರು ನಟಿಸಿದ್ದಾರೆ. ಮಿಷನ್‌ ಮಜ್ನು ಸಿನಿಮಾವನ್ನು ರೂನಿ ಸೋಲಿ, ಅಮರ್ ಬುಟಾಲಾ ಹಾಗೂ ಗರಿಮಾ ಮೆಹ್ತಾ ನಿರ್ಮಾಣ ಮಾಡಿದ್ದಾರೆ.

ರಶ್ಮಿಕಾ ಮತ್ತೊಂದು ಬಾಲಿವುಡ್‌ ಸಿನಿಮಾ ’ಗುಡ್‌ ಬೈ‘ ಚಿತ್ರದಲ್ಲಿ ನಟಿಸಲು ಸಹಿ ಹಾಕಿದ್ದಾರೆ. ಇದರ ಚಿತ್ರೀಕರಣ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ ಎಂಬ ಮಾಹಿತಿ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು