ಶುಕ್ರವಾರ, ಮಾರ್ಚ್ 31, 2023
22 °C

ಜಲ್ಲಿಕಟ್ಟು ನಿರ್ದೇಶಕನ ಜೊತೆ ಮೋಹನ್‌ಲಾಲ್‌ ಸಿನಿಮಾ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮಲಯಾಳದ ಜನಪ್ರಿಯ ನಟ ಮೋಹನ್‌ ಲಾಲ್‌, ಜಲ್ಲಿಕಟ್ಟು ಖ್ಯಾತಿಯ ನಿರ್ದೇಶಕ ಲಿಜೋ ಜೋಸ್‌ ಪೆಲಿಶೆರಿ ಜೊತೆ ತಮ್ಮ ಮುಂದಿನ ಸಿನಿಮಾ ಎಂದು ಘೋಷಿಸಿದ್ದಾರೆ.

ಲಿಜೋ ಜೋಸ್‌ ವಿಭಿನ್ನ ಸಿನಿಮಾಗಳಿಗೆ ಹೆಸರಾದವರು. ಅಂಗಮಾಲಿ ಡೈರೀಸ್‌, ಇ.ಮಾ.ಯು, ಜಲ್ಲಿಕಟ್ಟು, ಚುರುಲಿ ಮೊದಲಾದ ವಿಭಿನ್ನ ನೆಲೆಯ ಸಿನಿಮಾಗಳಿಂದ ಜನಪ್ರಿಯವಾದ ನಿರ್ದೇಶಕ. ಇವರ ಜೊತೆ ಮೋಹನ್‌ ಲಾಲ್‌ ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಭಾರತೀಯ ಸಿನಿಮಾ ರಂಗದಲ್ಲೇ ಅತ್ಯಂತ ಪ್ರತಿಭಾನ್ವಿತ, ಅಚ್ಚರಿಯ ನಿರ್ದೇಶಕ ಲಿಜೋ ಜೋಸ್‌ ಜೊತೆ ನನ್ನ ಮುಂದಿನ ಸಿನಿಮಾ ಘೋಷಿಸಲು ಹೆಮ್ಮೆಯಾಗುತ್ತಿದೆ. ಜಾನ್‌ ಆಂಡ್‌ ಮೇರಿ, ಮ್ಯಾಕ್ಸ್‌ ಲ್ಯಾಬ್ಸ್‌ ಒಟ್ಟಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ ಎಂದು ಮೋಹನ್‌ಲಾಲ್‌ ಟ್ವೀಟ್‌ ಮಾಡಿದ್ದಾರೆ. ತಂಡದ ಜೊತೆಗಿನ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

ಮಲಯಾಳದಲ್ಲಿ ಲಾಲೇಟನ್‌ ಎಂದೇ ಪ್ರಸಿದ್ಧರಾದ ಮೋಹನ್‌ ಲಾಲ್‌ ಸಿನಿಮಾವೆಂದರೆ ಅಭಿಮಾನಿಗಳ ಪಾಲಿಗೆ ಹಬ್ಬ. ಅವರ ಇತ್ತೀಚಿನ ಲೂಸಿಫರ್‌, ದೃಶ್ಯಂ–2 ಸಿನಿಮಾಗಳು ಸೂಪರ್‌ ಹಿಟ್‌ ಆಗಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು