‘ಲೂಸಿಫರ್‌ ಮಾಸ’!

ಭಾನುವಾರ, ಮಾರ್ಚ್ 24, 2019
27 °C

‘ಲೂಸಿಫರ್‌ ಮಾಸ’!

Published:
Updated:

ಮಾಲಿವುಡ್‌ನ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಅಭಿನಯದ ರಾಜಕೀಯ ಥ್ರಿಲ್ಲರ್‌ ಸಿನಿಮಾ ‘ಲೂಸಿಫರ್‌’ ಇದೇ ತಿಂಗಳು ಬಿಡುಗಡೆಯಾಗುವುದು ಖಚಿತವಾಗಿದೆ. ಟ್ವಿಟರ್‌ನಲ್ಲಿ ಲೂಸಿಫರ್‌ ಪ‍ರ ಒಂದು ವಿಶಿಷ್ಟ ಪ್ರಚಾರ ಅಭಿಯಾನ ನಡೆಯುತ್ತಿದೆ.

‘ಮಾರ್ಚಿಂಗ್‌ಲೂಸಿಫರ್‌ಮಂತ್‌’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಈ ಅಭಿಯಾನ ನಡೆಯುತ್ತಿದೆ!

ಬಹುನಿರೀಕ್ಷಿತ ಸಿನಿಮಾವೊಂದಕ್ಕೆ ಈ ಬಗೆಯ ಪ್ರಚಾರ ಅಭಿಯಾನ ಸಾಮಾಜಿಕ ಮಾಧ್ಯಮದಲ್ಲಿ ನಡೆದಿರುವುದು ವಿರಳ. ನಿರ್ದೇಶಕ ಪೃಥ್ವಿರಾಜ್‌ ಚಿತ್ರದ ಕಥಾವಸ್ತು ಮತ್ತು ಇಡೀ ತಾರಾಗಣದ ಬಗ್ಗೆ ಆರಂಭದಿಂದಲೂ ರಹಸ್ಯ ಕಾಪಾಡಿಕೊಂಡು ಬಂದಿದ್ದರು. ಪೋಸ್ಟರ್ ಮತ್ತು ಟ್ರೇಲರ್‌ನಲ್ಲೂ ಮೋಹನ್‌ಲಾಲ್‌ ಅವರನ್ನೇ ಹೆಚ್ಚು ಕೇಂದ್ರೀಕರಿಸಲಾಗಿತ್ತು. ಕಳೆದ ವಾರವಷ್ಟೇ ಆದಿಲ್‌ ಇಬ್ರಾಹಿಂ ಚಿತ್ರತಂಡಕ್ಕೆ ಸೇರ್ಪಡೆಯಾದ ಸುದ್ದಿಯನ್ನು ಪೋಸ್ಟರ್‌ ಮೂಲಕವೇ ಹಂಚಿಕೊಂಡಿತ್ತು. ಚಿತ್ರ ಬಿಡುಗಡೆಗೂ ಮೊದಲು ಕೊನೆಯ ಟ್ರೇಲರ್‌ ಕೊಡುವ ಚಿಂತನೆ ಪೃಥ್ವಿರಾಜ್‌ಗೆ ಇದೆಯಂತೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !