ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತಾರಾಗಣದ ಶಿವಾರ್ಜುನ

Last Updated 3 ಮಾರ್ಚ್ 2020, 8:43 IST
ಅಕ್ಷರ ಗಾತ್ರ

ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರುವ ‘ಶಿವಾರ್ಜುನ ಚಿತ್ರದ ‘ಹಕುನಾ ಮಟಾಟ’ ವಿಡಿಯೋ ಸಾಂಗ್‌ ಮತ್ತು ಇದೇ ಚಿತ್ರಕ್ಕೆ ಕವಿರಾಜ್‌ ರಚಿಸಿ, ನಟಿ ಮೇಘನಾ ರಾಜ್‌ ಹಾಡಿರುವ ‘ಅಲ್ಲೊಂದು ನೀಲಿ ಬಾನು’ ರೊಮ್ಯಾಂಟಿಕ್ ಗೀತೆ ಬಿಡುಗಡೆಯಾಗಿವೆ. ಇವು ಸಿನಿರಸಿಕರ ಗಮನ ಸೆಳೆಯುವಂತಿವೆ.

ಈ ಚಿತ್ರ ಇದೇ 12ರಂದು ತೆರೆ ಕಾಣಲಿದೆ. ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಶಿವತೇಜಸ್. ಜತೆಗೆ ಕಥೆ,ಚಿತ್ರಕಥೆಯನ್ನು ಇವರೇ ಬರೆದಿದ್ದಾರೆ. ಈ ಹಿಂದೆ ‘ಮಳೆ’, ‘ಧೈರ್ಯಂ’ ಮತ್ತು ‘ಲೌಡ್‌ ಸ್ಪೀಕರ್‌’ ಚಿತ್ರಕ್ಕೆ ಶಿವತೇಜಸ್‌ ಆ್ಯಕ್ಷನ್‌ ಕಟ್‌ ಹೇಳಿದ್ದರು. ಚಿತ್ರಕ್ಕೆ ಸಾಧುಕೋಕಿಲ ಹಿನ್ನೆಲೆ ಸಂಗೀತ ನೀಡಿದ್ದು, ಅವರ ಪುತ್ರ ಸುರಾಗ್‌ ಹಾಡುಗಳಿಗೆ ಸಂಗೀತ ಸಂಯೋಜಿಸಿ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿದ್ದಾರೆ.

ತಾರಾ ಅವರ ಪುತ್ರ ಶ್ರೀಕೃಷ್ಣ ಈ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದಾನೆ.

ಮೂರು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ದುಡಿದಿರುವಶಿವಾರ್ಜುನ, ಈ ಚಿತ್ರದ ನಿರ್ಮಾಪಕರು.ಪುತ್ರಿ ಹೆಸರಿನನಿಶ್ಚಿತಾ ಕಂಬೈನ್ಸ್ ಮೂಲಕ ಹಾಗೂ ಪತ್ನಿ ಎಂ.ಬಿ.ಮಂಜುಳಾ ಶಿವಾರ್ಜುನ ಹೆಸರಿನಲ್ಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ಮಾಪಕ ಹೆಸರೇ ಚಿತ್ರದ ಶೀರ್ಷಿಕೆಯಾಗಿದೆ. ‘ಇದೇ ಚಿತ್ರತಂಡದೊಂದಿಗೆ ಇನ್ನೊಂದು ಹೊಸ ಚಿತ್ರವನ್ನು ಸದ್ಯದಲ್ಲೇ ಪ್ರಕಟಿಸಲಿದ್ದೇನೆ’ ಎನ್ನುವ ಮಾತು ಸೇರಿಸಿದರು ಶಿವಾರ್ಜುನ.

‘ಸಂಪೂರ್ಣ ಆ್ಯಕ್ಷನ್‌ಪ್ರಧಾನ ಚಿತ್ರದಲ್ಲಿ ನಟಿಸದ ಕೊರತೆಯೊಂದು ನನ್ನನ್ನು ಕಾಡುತ್ತಿತ್ತು. ಅದನ್ನು ಈ ಚಿತ್ರದಲ್ಲಿ ನೀಗಿಸಿಕೊಂಡಿದ್ದೇನೆ. ಸಿನಿಮಾವನ್ನು ಪ್ರೇಕ್ಷಕನಾಗಿ ನೋಡಿ ತುಂಬಾ ಖುಷಿಪಟ್ಟಿದ್ದೇನೆ. ಇದನ್ನು ಸಂಪೂರ್ಣ ಪೈಸಾ ವಸೂಲ್‌ ಸಿನಿಮಾ ಎನ್ನಬಹುದು’ ಎಂದರು ನಟ ಚಿರಂಜೀವಿ ಸರ್ಜಾ.

ನಾಯಕಿ ಅಮೃತಾ ಅಯ್ಯಂಗಾರ್‌, ‘ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದೆ.ಸಿನಿಮಾ ಮನರಂಜನಾತ್ಮಕವಾಗಿದೆ. ನನ್ನದು ತುಂಬಾಬೋಲ್ಡ್ ಪಾತ್ರ. ಮಾತು, ಬಟ್ಟೆ, ವರ್ತನೆಯಲ್ಲೂ ಬೋಲ್ಡ್‌ನೆಸ್‌ ಇದೆ. ಒಂದು ರೀತಿ ಬಜಾರಿ ಪಾತ್ರ ಎನ್ನಬಹುದು’ ಎಂದರು.

‘ಕುಟುಂಬಗಳು ಸೇರಿ ಮಾಡಿರುವ ಸಿನಿಮಾ ಅಷ್ಟೇ ಅಲ್ಲ, ಮನರಂಜನೆಯಲ್ಲೂ ಪಕ್ಕಾ ಫ್ಯಾಮಿಲಿ ಚಿತ್ರ’ ಎಂದರು ನಟಿ ತಾರಾ ಮತ್ತು ಹಾಸ್ಯ ನಟ ಸಾಧು ಕೋಕಿಲ.

ಸಹ ನಾಯಕಿಯರಾಗಿಅಕ್ಷತಾ ಶ್ರೀನಿವಾಸ್, ಅಕ್ಷಿತಾ ಬಣ್ಣ ಹಚ್ಚಿದ್ದಾರೆ.ತಾರಾಗಣದಲ್ಲಿ ಕಿಶೋರ್, ಸಾಧು ಕೋಕಿಲ, ನಯನ, ಶಿವರಾಜ್.ಕೆ.ಆರ್.ಪೇಟೆ ಮುಂತಾದವರು ನಟಿಸಿದ್ದಾರೆ.

ಛಾಯಾಗ್ರಹಣ ಎಚ್‌.ಸಿ. ವೇಣು,ಸಂಕಲನ ಕೆ.ಎಂ.ಪ್ರಕಾಶ್, ಸಾಹಸ ರವಿವರ್ಮ, ವಿನೋದ್, ನೃತ್ಯ ಮುರಳಿ, ಗೀತ ಸಾಹಿತ್ಯ ಯೋಗರಾಜ್ ಭಟ್, ಕವಿರಾಜ್, ವಿ. ನಾಗೇಂದ್ರಪ್ರಸಾದ್ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT