ಮಂಡ್ಯ: ‘ಉರಿಗೌಡ, ದೊಡ್ಡನಂಜೇಗೌಡರ ಕುರಿತು ಸಿನಿಮಾ ಮಾಡುವುದಿಲ್ಲ. ನಿರ್ಮಲಾನಂದನಾಥ ಸ್ವಾಮೀಜಿಯವರ ಸಲಹೆ, ಮಾರ್ಗದರ್ಶನದಂತೆ ಇಲ್ಲಿಗೇ ಕೈಬಿಡುತ್ತೇನೆ’ ಎಂದು ಸಚಿವ, ನಿರ್ಮಾಪಕ ಮುನಿರತ್ನ ಸೋಮವಾರ ಹೇಳಿದರು.
ತಾಲ್ಲೂಕಿನ ಕೊಮ್ಮೇರಹಳ್ಳಿಯ ಆದಿಚುಂಚನಗಿರಿ, ವಿಶ್ವಮಾನವ ಶಾಖಾ ಮಠದ ಆವರಣದಲ್ಲಿ ಸ್ವಾಮೀಜಿ ಅವ
ರೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
‘ಮೈಸೂರು ಸಂಸ್ಥಾನ, ಟಿಪ್ಪು, ಉರಿಗೌಡ, ನಂಜೇಗೌಡರ ಬಗ್ಗೆ ಒಂದಷ್ಟು ದಾಖಲೆಗಳು ಸಿಕ್ಕಿದ್ದರಿಂದ ಚಿತ್ರ ನಿರ್ಮಿಸಬೇಕೆಂದುಕೊಂಡಿದ್ದೆ. ಸ್ವಾಮೀಜಿಯೊಂದಿಗೆ ಚರ್ಚಿಸಿದ ನಂತರ ಆ ವಿಚಾರ ಬಿಟ್ಟಿದ್ದೇನೆ. ಯಾರ ಮನಸ್ಸನ್ನೂ ನೋಯಿಸಿ ಸಿನಿಮಾ ಮಾಡುವ ಅವಶ್ಯಕತೆ ಇಲ್ಲ ಎನಿಸಿತು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.