Oscars 2023: RRR ನಾಟು ನಾಟು ಹಾಡು ರಚಿಸಲು 19 ತಿಂಗಳು ಬೇಕಾಗಿತ್ತು!

ಹೈದರಾಬಾದ್: ಬ್ಲಾಕ್ ಬಸ್ಟರ್ ‘ಆರ್‌ಆರ್‌ಆರ್’ ಚಿತ್ರದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿರುವುದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ತಂದಿದೆ. ಈ ಹಾಡನ್ನು ರಚಿಸಿರುವ ಗೀತರಚನೆಕಾರ ಚಂದ್ರಬೋಸ್ ಅವರು ಆಶ್ಚರ್ಯಕರ ಮಾಹಿತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಹಿಂದೆ ಎನ್‌ಡಿಟಿವಿಯೊಂದಿಗೆ ಮಾತನಾಡಿದ್ದ ಅವರು, ನಾಟು ನಾಟು ಹಾಡನ್ನು ರಚಿಸಲು 19 ತಿಂಗಳು ಬೇಕಾಗಿತ್ತು ಎಂದಿದ್ದಾರೆ.
ನಮ್ಮ ಕೃಷಿ, ಬದುಕು, ಗ್ರಾಮೀಣ, ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಹಾಡು ಬರೆಯಲು ರಾಜಮೌಳಿ ಹೇಳಿದ್ದರು. ಅದರಂತೆ ಹಾಡು ರಚಿಸಲು ತೊಡಗಿಕೊಂಡಾಗ ಬದಲಾವಣೆ ಮಾಡುತ್ತಾ ಮಾಡುತ್ತಾ ಇಂದಿನ ನಾಟು ನಾಟು ಹಾಡು ಆಯಿತು ಎಂದಿದ್ದಾರೆ.
‘ನಾಟು ನಾಟು’ಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿದೆ. ನನಗೆ ಅತ್ಯಂತ ಸಂತಸ ಮತ್ತು ಭಾವನಾಕತ್ಮಕ ವಿಷಯವಾಗಿದೆ. ಇದು ನನ್ನ ಹಿಂದಿನ ಪಯಣದ ಬಗ್ಗೆ ಯೋಚಿಸುವಂತೆ ಮಾಡಿದೆ’ಎಂದು ಚಂದ್ರಬೋಸ್ ಹೇಳಿದ್ದಾರೆ. ಇದಕ್ಕೆಲ್ಲ ರಾಜಮೌಳಿ, ಕೀರವಾಣಿ ಅವರೇ ಕಾರಣ ಎಂದು ಹೇಳಿದ್ದಾರೆ.
ಬ್ಲಾಕ್ಬಸ್ಟರ್ ಸಿನಿಮಾ 'ಟೈಟಾನಿಕ್'ಗೆ 25 ವರ್ಷ: 3ಡಿಯಲ್ಲಿ ಮರು ಬಿಡುಗಡೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.