ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡ ಸಮಂತಾ: ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ವೈರಲ್

ಹೈದರಾಬಾದ್: ಮುಂಬೈಯಲ್ಲಿ ಇತ್ತೀಚೆಗೆ ನಡೆದ ‘ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಅವರು ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಹಸಿರು ಮತ್ತು ಕಪ್ಪು ಬಣ್ಣದ ಗೌನ್ ಧರಿಸಿದ್ದ ಫೋಟೊಗಳನ್ನು ಸಮಂತಾ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಇದೀಗ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಮಂತಾ ಅವರ ವಿಚ್ಛೇದಿತ ಪತಿ ನಾಗ ಚೈತನ್ಯ ಅವರ ಸೋದರ ಸಂಬಂಧಿ ಆಶ್ರಿತಾ ದಗ್ಗುಬಾಟಿ ಕೂಡ ಹೃದಯ ಎಮೋಜಿಯೊಂದಿಗೆ ಕಾಮೆಂಟ್ ಮಾಡಿದ್ದಾರೆ.
ಓದಿ... ಎಂಥ ಅದ್ಭುತ ಫೋಟೊ...: ಭಗವಂತ ಮಾನ್ರನ್ನು ಅಭಿನಂದಿಸಿದ ಹರ್ಭಜನ್ ಸಿಂಗ್
ಸಮಂತಾ ಹಾಗೂ ನಾಗ ಚೈತನ್ಯ ಅವರು ಕಳೆದ ವರ್ಷದ ಅಕ್ಟೋಬರ್ನಲ್ಲಿ ವಿಚ್ಛೇದನ ಪಡೆದ್ದರು.
'ಮನಂ’, ‘ಆಟೋನಗರ್ ಸೂರ್ಯ’, ‘ಮಜಲಿ’ ಮುಂತಾದ ಚಿತ್ರಗಳಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು. ವಿಚ್ಛೇದನ ಪಡೆದ ಬಳಿಕ ಇಬ್ಬರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.
ಇತ್ತೀಚಿಗೆ ಸುಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ‘ಪುಷ್ಪ’ ಸಿನಿಮಾದಲ್ಲಿ ಸಮಂತಾ, ‘ಹೂ ಅಂತಿಯಾ ಮಾವ.. ಊ ಊ ಅಂತಿಯಾ’ ಹಾಡಿಗೆ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿದ್ದರು.
ಫಿಲಿಪ್ ಜಾನ್ ನಿರ್ದೇಶನದ ‘ಅರೆಂಜ್ಮೆಂಟ್ಸ್ ಆಫ್ ಲವ್’ ಎಂಬ ಹಾಲಿವುಡ್ ಚಿತ್ರದಲ್ಲಿ ಸಮಂತಾ ಅಭಿನಯಿಸಲಿದ್ದಾರೆ.
ಇದನ್ನೂ ಓದಿ... 'ಪುಷ್ಪ' ಹಾಡು ಕೇಳಿ: ಬೋಲ್ಡ್ ಲುಕ್ನಲ್ಲಿ ’ಹೂ ಅಂತಿಯಾ ಮಾಮ' ಅಂದ್ರು ಸಮಂತಾ
ಓದಿ... ವಿಡಿಯೊ | ‘ಹೂ ಅಂತಿಯಾ ಮಾವ..’ ಡ್ಯಾನ್ಸ್ ಹಿಂದಿನ ಕಷ್ಟವನ್ನು ವಿವರಿಸಿದ ಸಮಂತಾ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.