ಮಾರ್ಚ್ 19 ರಂದು ವಿಶ್ವದಾದ್ಯಂತ ತೆರೆಕಾಣಲಿರುವ ಯಶ್ ನಟನೆಯ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಕುತೂಹಲ ಹುಟ್ಟಿಸುತ್ತಿದೆ. ಕಥೆಯೊಳಗಿನ ಪಾತ್ರಗಳನ್ನು ಚಿತ್ರತಂಡ ಪರಿಚಯಿಸಲಾರಂಭಿಸಿದ್ದು, ‘ಗಂಗಾ’ ಎಂಬ ಪಾತ್ರದಲ್ಲಿ ಬಹುಭಾಷಾ ನಟಿ ನಯನ್ತಾರಾ ಕಾಣಿಸಿಕೊಳ್ಳಲಿದ್ದಾರೆ.

ಮಲಯಾಳ ಹಾಗೂ ತಮಿಳು ಸಿನಿಮಾಗಳಲ್ಲಿ ಮಿಂಚಿರುವ ನಯನ್ತಾರಾ ‘ಟಾಕಿಕ್ಸ್’ನಲ್ಲಿ ಹೇಗಿರಲಿದ್ದಾರೆ ಎನ್ನುವುದನ್ನು ಫಸ್ಟ್ಲುಕ್ ಮೂಲಕ ತೋರಿಸಲಾಗಿದೆ. ಈಗಾಗಲೇ ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಕಿಯಾರಾ ಅಡ್ವಾಣಿಯವರ ‘ನಾದಿಯಾ’ ಪಾತ್ರವನ್ನು ಹಾಗೂ ಹುಮಾ ಖುರೇಷಿ ಅವರ ‘ಎಲಿಜಬೆತ್’ ಪಾತ್ರವನ್ನು ಚಿತ್ರತಂಡ ಪರಿಚಯಿಸಿದೆ. ಕೈಯಲ್ಲಿ ಬಂದೂಕು ಹಿಡಿದು ಕಪ್ಪು ಉಡುಪಿನಲ್ಲಿ ನಯನ್ತಾರಾ ಮಿಂಚಿದ್ದಾರೆ. ಉಪೇಂದ್ರ ನಟನೆಯ ‘ಸೂಪರ್’ನಲ್ಲಿ ನಟಿಸಿದ್ದು ನಯನ್ತಾರಾ ‘ಟಾಕ್ಸಿಕ್’ ಮೂಲಕ ಕನ್ನಡಕ್ಕೆ ಮರಳಿದ್ದಾರೆ.

ಯಶ್ ನಟನೆಯ 19ನೇ ಸಿನಿಮಾ ಇದಾಗಿದೆ. ‘ಗಂಗಾ’ ಪಾತ್ರವು ಸಿನಿಮಾದಲ್ಲಿನ ಪ್ರಮುಖ ಪಾತ್ರ ಎಂದು ಹೇಳಿದೆ ಚಿತ್ರತಂಡ. ‘ಕಳೆದ ಎರಡು ದಶಕಗಳಿಂದ ನಯನ್ತಾರಾ ಅವರನ್ನು ತೆರೆ ಮೇಲೆ ಎಲ್ಲರೂ ಗಮನಿಸಿರುತ್ತಾರೆ. ಆದರೆ ‘ಟಾಕ್ಸಿಕ್’ನಲ್ಲಿ ಅವರೊಳಗಿನ ಪ್ರತಿಭೆಯ ಅನಾವರಣ ಎಲ್ಲರಿಗೂ ಆಶ್ಚರ್ಯ ಉಂಟುಮಾಡಲಿದೆ. ಹಿಂದೆಂದೂ ತೋರಿಸದ ರೀತಿಯಲ್ಲಿ ತೆರೆಯ ಮೇಲೆ ನಯನ್ತಾರಾ ಅವರನ್ನು ತರಬೇಕೆಂಬುದು ನನ್ನ ಆಸೆಯಾಗಿತ್ತು. ಚಿತ್ರೀಕರಣದ ವೇಳೆಯಲ್ಲಿ ಪಾತ್ರಕ್ಕೆ ನಯನ್ತಾರಾ ವ್ಯಕ್ತಿತ್ವವು ಎಷ್ಟು ಹತ್ತಿರವಾಗಿದೆ ಎಂಬುದು ನನಗೆ ಅರಿವಾಯಿತು’ ಎಂದಿದ್ದಾರೆ ನಿರ್ದೇಶಕಿ ಗೀತು ಮೋಹನ್ದಾಸ್.

ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿದೆ. ಸಿನಿಮಾವು ಹಿಂದಿ, ತಮಿಳು, ತೆಲುಗು, ಮಲಯಾಳ ಸೇರಿದಂತೆ ಹಲವು ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಗಲಿದೆ. ಹಾಲಿವುಡ್ನ ‘ಜಾನ್ ವಿಕ್’, ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’, ‘ವಾರಿಯರ್’ ಮುಂತಾದ ಸಿನಿಮಾಗಳಿಗೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದ ಜೆ.ಜೆ.ಪೆರ್ರಿ ‘ಟಾಕ್ಸಿಕ್’ನ ಸಾಹಸ ದೃಶ್ಯಗಳ ಸಂಯೋಜನೆ ಮಾಡಿದ್ದಾರೆ. ‘ಕೆ.ಜಿ.ಎಫ್’ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಲಿದ್ದಾರೆ. ರಾಜೀವ್ ರವಿ ಛಾಯಾಚಿತ್ರಗ್ರಹಣ, ಉಜ್ವಲ್ ಕುಲಕರ್ಣಿ ಸಂಕಲನ, ಟಿಪಿ ಅಬಿದ್ ನಿರ್ಮಾಣ ವಿನ್ಯಾಸ ಚಿತ್ರಕ್ಕಿದೆ.