ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಮಲದಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಯನತಾರ

Last Updated 11 ಜೂನ್ 2022, 17:02 IST
ಅಕ್ಷರ ಗಾತ್ರ

ಹೈದರಾಬಾದ್: ಇತ್ತೀಚೆಗೆ ವಿವಾಹವಾದ ಚಿತ್ರನಟಿ ನಯನತಾರಾ ಹಾಗೂ ನಟ ವಿಘ್ನೇಶ್ ಶಿವನ್ ಅವರು ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಚಪ್ಪಲಿ ಧರಿಸಿದ್ದರು ಎಂಬ ವಿಚಾರ ವಿವಾದಕ್ಕೆ ಕಾರಣವಾಗಿದೆ. ಈ ತಾರಾದಂಪತಿ ದೇವಸ್ಥಾನದ ಎದುರಿನಲ್ಲಿ ಫೊಟೊಶೂಟ್ ಮಾಡಿದ್ದಕ್ಕೆ ಭಕ್ತರಿಂದ ಟೀಕೆ ಎದುರಾಗಿದೆ.

ನಯನತಾರಾ ಅವರು ಚಪ್ಪಲಿ ಧರಿಸಿ ದೇವಸ್ಥಾನದ ಆವರಣದಲ್ಲಿ ಸುತ್ತಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರತಿ ವರ್ಷ ಬ್ರಹ್ಮೋತ್ಸವ ನಡೆಯುವ ಈ ಜಾಗದಲ್ಲಿ ಚಪ್ಪಲಿ ಧರಿಸಿ ಓಡಾಡಿದ್ದಾರೆ. ದೇವಸ್ಥಾನ ಪ್ರವೇಶಿಸುವ ನಾಲ್ಕು ಮಾರ್ಗಗಳಲ್ಲಿ ಚಪ್ಪಲಿ ಧರಿಸಬಾರದು ಎಂದು ಟಿಟಿಡಿ ಫಲಕ ಹಾಕಿದೆ.

ಮಹಾಬಲಿಪುರಂ ಸಮೀಪದ ರೆಸಾರ್ಟ್‌ನಲ್ಲಿ ಗುರುವಾರ ಮದುವೆಯಾಗಿದ್ದ ಇವರು, ಮರುದಿನ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಬಂದಿದ್ದರು. ದಂಪತಿಯ ಜೊತೆ ಬಂದಿದ್ದ ಸಹಾಯಕರೂ ಚಪ್ಪಲಿ ಧರಿಸಿದ್ದರು ಎಂದು ಭಕ್ತರು ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT