ಗುರುವಾರ , ಅಕ್ಟೋಬರ್ 29, 2020
26 °C

ನಟಿ ದೀಪಿಕಾ ಪಡುಕೋಣೆಯ ಆಪ್ತೆ ಕರೀಷ್ಮಾ ಪ್ರಕಾಶ್‌ ಯಾರು ಗೊತ್ತೇ?

. Updated:

ಅಕ್ಷರ ಗಾತ್ರ : | |

Prajavani

ಡ್ರಗ್ಸ್‌ ಪೂರೈಕೆ ಸಂಬಂಧ ದೀಪಿಕಾ ಪಡುಕೋಣೆ ಮತ್ತು ಕರೀಷ್ಮಾ ಪ್ರಕಾಶ್‌ ನಡುವಿನ ವಾಟ್ಸ್‌ಆ್ಯಪ್ ಸಂದೇಶ ವಿನಿಮಯ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆಯೇ ವಿಚಾರಣೆಗೆ ಹಾಜರಾಗುವಂತೆ ಕರೀಷ್ಮಾಗೆ ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ)ಯು ನೋಟಿಸ್‌ ಜಾರಿಗೊಳಿಸಿದೆ ಎಂಬ ಸುದ್ದಿ ಹೊರಬಿದ್ದಿದೆ.

ದೀಪಿಕಾಗೆ ಡ್ರಗ್ಸ್‌ ಪೂರೈಸುವಷ್ಟು ಆತ್ಮೀಯತೆ ಬೆಳೆಸಿಕೊಂಡಿರುವ ಈ ಕರೀಷ್ಮಾ ಯಾರು ಎಂಬ ಪ್ರಶ್ನೆ ಡಿಪ್ಪಿಯ ಅಭಿಮಾನಿಗಳಿಗೆ ಕಾಡುತ್ತಿದೆ. ಅಂದಹಾಗೆ ಕರೀಷ್ಮಾ, ದೀಪಿಕಾ ಪಡುಕೋಣೆಯ ಮ್ಯಾನೇಜರ್‌ ಅಂತೆ! ಆಕೆ ಕೆಡಬ್ಲ್ಯುಎಎನ್‌ ಟಾಲೆಂಟ್‌ ಮ್ಯಾನೇಜ್‌ಮೆಂಟ್‌ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಾರಂತೆ. ಈ ಮ್ಯಾನೇಜ್‌ಮೆಂಟ್‌ನ ಸಿಇಒ ಧ್ರುವ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಎನ್‌ಸಿಬಿ ನೋಟಿಸ್‌ ನೀಡಿದೆ.

ಸೋಮವಾರ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಟಾಲೆಂಟ್‌ ಮ್ಯಾನೇಜರ್‌ ಆದ ಜಯಾ ಸಹಾ ಅವರನ್ನು ಎನ್‌ಸಿಬಿ ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆ ವೇಳೆ ಬಾಲಿವುಡ್‌ನ ಹಲವು ನಟ, ನಟಿಯರು ಈ ಡ್ರಗ್ಸ್‌ ಜಾಲದಲ್ಲಿ ಭಾಗಿಯಾಗಿರುವ ಸಂಗತಿ ಬಯಲಿಗೆ ಬಂದಿದೆಯಂತೆ.

ಉಪೇಂದ್ರ ನಾಯಕರಾಗಿದ್ದ ‘ಐಶ್ವರ್ಯ’ ಚಿತ್ರದ ಮೂಲಕವೇ ದೀಪಿಕಾ ಪಡುಕೋಣೆ ಬೆಳ್ಳಿತೆರೆ ಪ್ರವೇಶಿಸಿದ್ದರು. ಇದಾದ ಬಳಿಕ ಅವರ ಯಾವುದೇ ಕನ್ನಡ ಸಿನಿಮಾದಲ್ಲಿ ನಟಿಸಿರಲಿಲ್ಲ. ‘ಓಂ ಶಾಂತಿ ಓಂ’ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದ ಡಿಪ್ಪಿ ಇತ್ತೀಚೆಗೆ ಬಿಡುಗಡೆಯಾದ ‘ಚಪಾಕ್‌’ ಸಿನಿಮಾದವರೆಗೂ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ. ನಾಗ್‌ ಅಶ್ವಿನ್‌ ನಿರ್ದೇಶಕನ ಪ್ರಭಾಸ್‌ ನಟನೆಯ ತೆಲುಗಿನ ಹೊಸ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು