ಸೋಮವಾರ, ಅಕ್ಟೋಬರ್ 3, 2022
24 °C

ಒಂದೂವರೆ ವರ್ಷದ ಬಳಿಕ ನಟ ದರ್ಶನ್ ವಿರುದ್ಧ ದೂರು: ಬೆದರಿಕೆ ಸಂಭಾಷಣೆ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೀವ ಬೆದರಿಕೆ ಆರೋಪದಡಿ ನಟ ದರ್ಶನ್ ವಿರುದ್ಧ ದಾಖಲಾಗಿರುವ ಎನ್‌ಸಿಆರ್ ಬಗ್ಗೆ ಪ್ರಾಥಮಿಕ ಮಾಹಿತಿ ಕೆಲಹಾಕುತ್ತಿರುವ ಕೆಂಗೇರಿ ಪೊಲೀಸರು, ಮೊಬೈಲ್ ಸಂಭಾಷಣೆ ಪರಿಶೀಲಿಸುತ್ತಿದ್ದಾರೆ.

‘ನಿರ್ಮಾಪಕ ಭರತ್ ವಿಷ್ಣುಕಾಂತ್ ಹಾಗೂ ನಟ ದರ್ಶನ್ ಒಂದೂವರೆ ವರ್ಷದ ಹಿಂದೆ ಮೊಬೈಲ್‌ನಲ್ಲಿ ಮಾತನಾಡಿದ್ದಾರೆ. ಅದೇ ಸಂದರ್ಭದಲ್ಲೇ ದರ್ಶನ್ ಜೀವ ಬೆದರಿಕೆಯೊಡ್ಡಿದ್ದರೆಂದು ಭರತ್ ಆರೋಪಿಸುತ್ತಿದ್ದಾರೆ. ಆದರೆ, ಒಂದೂವರೆ ವರ್ಷದ ಬಳಿಕ ದೂರು ನೀಡಿರುವುದು ಏಕೆ ಎಂಬ ಪ್ರಶ್ನೆ ಮೂಡಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ಆಡಿಯೊ ಹರಿದಾಡುತ್ತಿದ್ದು, ಇದನ್ನು ನೋಡಿಕೊಂಡು ದೂರು ಕೊಟ್ಟಿರುವುದಾಗಿ ಭರತ್ ಹೇಳುತ್ತಿದ್ದಾರೆ. ಭರತ್‌ ಅವರಿಂದ ಮತ್ತಷ್ಟು ಮಾಹಿತಿ ಸಂಗ್ರಹಿಸಬೇಕಿದೆ. ಜೊತೆಗೆ, ಎಫ್‌ಐಆರ್ ದಾಖಲಿಸಿಕೊಳ್ಳುವ ಬಗ್ಗೆ ನ್ಯಾಯಾಲಯದ ಆದೇಶವನ್ನು ಕಾಯುತ್ತಿದ್ದೇವೆ’ ಎಂದೂ ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು