ಸಿನಿ ಪತ್ರಕರ್ತ ಅಫ್ಜಲ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ನೆನಪುಗಳ ಮಾತು ಮಧುರ’ ಸಿನಿಮಾ ಇಂದು (ಫೆ.6) ಬಿಡುಗಡೆಯಾಗುತ್ತಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತು. ಸೆವೆನ್ ರಾಜ್ ಅವರು ನಾಯಕನಾಗಿ ನಟಿಸುವುದರ ಜತೆಗೆ ಬಂಡವಾಳವನ್ನೂ ಹೂಡಿದ್ದಾರೆ. ವಸಿಷ್ಠ ಬಂಟನೂರು, ರಣವೀರ್, ರಾಜ್ ಪ್ರಭು, ಅಂಜಲಿ, ರೇಖಾ ರಮೇಶ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
.Sandalwood: ‘ನೆನಪುಗಳ ಮಾತು ಮಧುರ’ ಟ್ರೇಲರ್ ಬಿಡುಗಡೆ.ರಕ್ಕಸಪುರದೋಳ್ ಪ್ರೀಮಿಯರ್ ಶೋಗೆ ಜನರ ಮೆಚ್ಚುಗೆ: ರಾಜ್ ಬಿ ಶೆಟ್ಟಿ ಹೇಳಿದ್ದೇನು?.
ಈ ಸಿನಿಮಾದಲ್ಲಿ ನಾಲ್ಕು ಕಥೆಗಳು ಇರಲಿದ್ದು, ಒಂದು ಕಥೆ ಇಪ್ಪತ್ತೈದು ನಿಮಿಷಗಳ ಅವಧಿ ಇರುತ್ತದೆ. ನಾಲ್ಕು ಕಥೆಗಳು ಬೇರೆಯದೆ ಆಯಾಮದಲ್ಲಿ ಸಾಗುತ್ತವೆ. ನಾವು ಎದುರಿಸುತ್ತಿರುವ ಹಾಗೂ ನೋಡುತ್ತಿರುವ ಕೆಲವು ವಿಷಯಗಳೇ ಈ ಚಿತ್ರದ ಕಥೆಗೆ ಸ್ಫೂರ್ತಿಯಾಗಿದೆ. ವಿಶೇಷ ಏನೆಂದರೆ. ನಿರ್ಮಾಪಕ ಸೆವೆನ್ ರಾಜ್ ಅವರು ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ ಬಂಡವಾಳವನ್ನೂ ಹೂಡಿದ್ದಾರೆ.

ಈ ಸಿನಿಮಾದ ಕುರಿತು ಅಫ್ಜಲ್ ಅವರು ‘ಪ್ರಜಾವಾಣಿ ಡಿಜಿಟಲ್’ ಜತೆಗೆ ಮಾತನಾಡಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ‘ಇದು ನನ್ನ ನಿರ್ದೇಶನದ ಮೂರನೇ ಸಿನಿಮಾ. ಈಗ ಮೊದಲ ಸಿನಿಮಾ ಬಿಡುಗಡೆಯಾಗುತ್ತಿದೆ. ‘ಮೊಬೈಲ್ ರಾಜ’,‘ಹೊಸತರ ’ಎಂಬ ಎರಡು ಸಿನಿಮಾಗಳನ್ನು ಮಾಡಿದ್ದೇನೆ. ಅವುಗಳು ಬಿಡುಗಡೆಯ ಹಂತದಲ್ಲಿವೆ. ವಿದೇಶದಲ್ಲಿ ‘ಹೊಸತರ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ರಾಜು ಎಮ್ಮಿಗನೂರು ಅವರು ಈ ಚಿತ್ರಕ್ಕೆ ಸುಮಧುರವಾದ ಸಂಗೀತವನ್ನು ಸ್ಪರ್ಶ ನೀಡಿದ್ದಾರೆ. ಕಾರ್ತಿಕ್ ಈಶ್ವರಾಚಾರಿ ಅವರ ಸಂಕಲನ ಹಾಗೂ ದೇವರಾಜ ಕುಷ್ಟಗಿ, ಸ್ವಾಮಿ ಅವರು ನಮ್ಮ ಜೊತೆಗೆ ನಿಂತಿದ್ದಾರೆ. 2021ರಲ್ಲಿ ‘ನೆನಪುಗಳ ಮಾತು ಮಧುರ’ ಕಥೆಯನ್ನು ಬರೆದೆ. ಹಗಲು ರಾತ್ರಿ ಎನ್ನದೇ ಕೇವಲ 7 ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಮುಕ್ತಾಯ ಮಾಡಿದ್ದೀವಿ. ಈಗ ಎಲ್ಲದ್ದಕ್ಕೂ ನಾನೇ ಓಡಾಡುತ್ತಿದ್ದೇನೆ. ಪ್ರೇಕ್ಷಕರು ನಮ್ಮ ಸಿನಿಮಾ ನೋಡಿ ಅವರ ಪ್ರತಿಕ್ರಿಯೆ ತಿಳಿಸಿದರೇ ಅಷ್ಟೇ ಸಾಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.