ಹೊನ್ನರಾಜ್ ಮೊದಲ ಸಲ ಆ್ಯಕ್ಷನ್ ಕಟ್ ಹೇಳಿ, ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರಕ್ಕೆ ಸಂಜಯ್ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ. ‘ಚಿತ್ರದಲ್ಲಿ ನಾಯಕ ಯಶ್ ಅಭಿಮಾನಿಯಾಗಿರುತ್ತಾನೆ. ಅದಕ್ಕಾಗಿ ಈ ಶೀರ್ಷಿಕೆ ಇಡಲಾಗಿದೆ. ನೈಜ ಘಟನೆಯನ್ನು ಆಧರಿಸಿ ನಿರ್ಮಾಣವಾಗಿರುವ ಕೌಟುಂಬಿಕ ಮನರಂಜನೆಯ ಚಿತ್ರ ಇದಾಗಿದೆ. ನಾಯಕ ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುತ್ತ, ಸದಾ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುತ್ತಾನೆ.ಮದ್ದೂರು, ಹುಳಿಯಾರು, ಚಿಕ್ಕನಾಯಕನಾಹಳ್ಳಿ, ಶ್ರೀರಂಗಪಟ್ಟಣದ ಸುತ್ತಮುತ್ತ ಚಿತ್ರೀಕರಿಸಲಾಗಿದೆ’ ಎಂದರು ನಿರ್ದೇಶಕರು.