ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳಲ್ಲಿ ಖ್ಯಾತ ನಟಿಯರು ಐಟಂ ಸಾಂಗ್ಗೆ ಸೊಂಟ ಬಳುಕಿಸುವುದು ಹೊಸದೇನಲ್ಲ. ಥಿಯೇಟರ್ನತ್ತ ಪ್ರೇಕ್ಷಕರನ್ನು ಸೆಳೆಯಲು ನಿರ್ಮಾಪಕರು ಈ ಕಸರತ್ತು ನಡೆಸುವುದು ಮಾಮೂಲು. ನಟಿಯರು ಕೂಡ ಸುಖಾಸುಮ್ಮನೆ ನಡು ಬಳುಕಿಸುವುದಿಲ್ಲ. ದುಬಾರಿ ಸಂಭಾವನೆ ಕೇಳಿ ನಿರ್ಮಾಪಕರನ್ನೇ ದಂಗುಬಡಿಸುತ್ತಾರೆ.

ತೆಲುಗು ಚಿತ್ರರಂಗದಲ್ಲಿ ಕಾಜಲ್ ಅಗರ್ವಾಲ್, ತಮನ್ನಾ ಭಾಟಿಯಾ, ರೆಜಿನಾ ಎಲ್ಲರೂ ಐಟಂ ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ತೆರೆಕಂಡ ಮಹೇಶ್ ಬಾಬು ನಟನೆಯ ‘ಸರಿಲೇರು ನಿಕೇವ್ವರು’ ಚಿತ್ರದ ಹಾಡೊಂದಕ್ಕೆ ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ್ದರು. ಆಕೆ ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 1’ ಚಿತ್ರದಲ್ಲೂ ಐಟಂ ಸಾಂಗ್ಗೆ ನಡು ಬಳುಕಿಸಿದ್ದರು. ಚಿರಂಜೀವಿ ನಟನೆಯ ‘ಆಚಾರ್ಯ’ ಚಿತ್ರದಲ್ಲಿ ರೆಜಿನಾ ಹೆಜ್ಜೆ ಹಾಕಿದ್ದಾರೆ.

‘ಮೆಗಾಸ್ಟಾರ್ ಜೊತೆಗೆ ಕುಣಿದಿದ್ದು ನನ್ನ ವೃತ್ತಿಬದುಕಿನ ಅವಿಸ್ಮರಣೀಯ ಕ್ಷಣ’ ಎಂದು ಆಕೆ ಹೇಳಿದ್ದು ಸುದ್ದಿಯಾಗಿತ್ತು.
ಈಗ ಐಟಂ ಸಾಂಗ್ಗೆ ಹೆಜ್ಜೆ ಹಾಕುವ ಸರದಿ ನಿಧಿ ಅಗರ್ವಾಲ್ ಅವರದ್ದು. ಶ್ರೀನಿವಾಸ್ ಬೆಲ್ಲಮಕೊಂಡ ‘ಅಲ್ಲುಡು ಅದುರ್ಸ್’ ಎಂಬ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದರ ಹಾಡೊಂದರಲ್ಲಿ ಡಾನ್ಸ್ ಮಾಡುವಂತೆ ನಿಧಿಗೆ ಕೋರಿದ್ದಾರೆ. ಆಕೆ ₹ 60 ಲಕ್ಷ ಸಂಭಾವನೆ ನೀಡುವಂತೆ ಬೇಡಿಕೆ ಇಟ್ಟಿದ್ದಾಳಂತೆ. ಆಕೆಯ ದುಬಾರಿ ಸಂಭಾವನೆಗೆ ಚಿತ್ರತಂಡವೇ ಬೆರಗಾಗಿದೆಯಂತೆ.

ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಕೆಗೆ ಹೆಚ್ಚಿನ ಮೊತ್ತ ಕೊಡಲು ನಿರ್ಮಾಪಕರು ಸಿದ್ಧರಿಲ್ಲ. ಹಾಗಾಗಿ, ತಮನ್ನಾ ಅವರನ್ನೇ ಚಿತ್ರದ ಐಟಂ ಸಾಂಗ್ನಲ್ಲಿ ಕುಣಿಸಲು ನಿರ್ದೇಶಕರು ನಿರ್ಧರಿಸಿದ್ದಾರೆ ಎಂಬುದು ಟಾಲಿವುಡ್ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.