ಬುಧವಾರ, ಮಾರ್ಚ್ 3, 2021
18 °C

ಇನ್‌ಸ್ಟಾಗ್ರಾಮಲ್ಲಿ ಬಿಸಿ ಏರಿಸಿದ ನಿಧಿ ಸುಬ್ಬಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಲ ದಿನಗಳಿಂದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ನಟಿ ನಿಧಿ ಸುಬ್ಬಯ್ಯ ಏಕಾಏಕಿ ಇನ್‌ಸ್ಟಾಗ್ರಾಮ್‌ನಲ್ಲಿ ಬಿಸಿ ಏರಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಿಧಿ, ಈ ಬಾರಿ ಮಿರರ್ ಸೆಲ್ಫಿ ಚಿತ್ರ ಹಾಕಿ ಸುದ್ದಿಯಾಗಿದ್ದಾರೆ. ‘ಬಿ ಯುವರ್ ಓನ್ ಕೈಂಡ್ ಆಫ್ ಬ್ಯೂಟಿಫುಲ್’ಎಂದು ಬರೆದುಕೊಂಡಿರುವ ನಟಿ ಚಿತ್ರಕ್ಕೆ ಬಹಳಷ್ಟು ಕಾಮೆಂಟ್‌ಗಳು ಬಂದಿವೆ.

ಸ್ವಲ್ಪ ಉದ್ದದ ಒಳ ಉಡುಪು ಧರಿಸಬಹುದಿತ್ತು ಎಂದು ಕೆಲವರು ಕಾಮೆಂಟ್ ಮಾಡಿದರೆ, ಮತ್ತೆ ಕೆಲವರು ಲಕ್ಷ ಲಕ್ಷ ಸಂಪಾದನೆ ಮಾಡಿದರೂ ಉಡಲು ಬಟ್ಟೆ ಇಲ್ಲವೆ ಎಂದು ಆಕ್ಷೇಪ ಎತ್ತಿದ್ದಾರೆ.
 
ಚಮ್ಕಾಯ್ಸಿ ಚಿಂದಿ ಉಡಾಯ್ಸಿ, ಕೃಷ್ಣಾ ನೀ ಲೇಟ್ ಆಗಿ ಬಾರೋ, ಪಂಚರಂಗಿ, ವೀರಬಾಹು, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಅಣ್ಣಾ ಬಾಂಡ್, ಓಹ್ ಮೈ ಗಾಡ್, ಅಜಬ್ ಗಜಬ್ ಲವ್ ಸೇರಿದಂತೆ ಕನ್ನಡ, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ನಿಧಿ ಸುಬ್ಬಯ್ಯ, ಸದ್ಯ ಯಾವುದೇ ಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಎಲ್ಲಿದ್ದೀರಿ? ಏನ್ ಮಾಡ್ತಿದ್ದೀರಿ ಎಂದು ಇನ್‌ಸ್ಟಾಗ್ರಾಮಲ್ಲಿ ಕೇಳಿದ ಪ್ರಶ್ನೆಗೂ ಉತ್ತರ ಬಂದಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು