ಶನಿವಾರ, ಫೆಬ್ರವರಿ 29, 2020
19 °C

ನಿಖಿಲ್‌ಗೆ ರೇವತಿ ಜೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ನಿಖಿಲ್ ಕುಮಾರಸ್ವಾಮಿ, ರೇವತಿ ಅವರೊಂದಿಗೆ ಸೋಮವಾರ (ಫೆ.10) ‘ಎಂಗೇಜ್’ ಆಗಲಿದ್ದಾರೆ. ಬೆಂಗಳೂರಿನ ತಾಜ್ ವೆಸ್ಟ್ಎಂಡ್ ಹೋಟೆಲ್‌ನಲ್ಲಿ ನಡೆಯಲಿರುವ ನಿಶ್ಚಿತಾರ್ಥದಲ್ಲಿ ರಾಜಕೀಯ ಹಾಗೂ ಸಿನಿಮಾ ರಂಗಗಳ ಪ್ರಮುಖರು ಭಾಗಿ ಆಗಲಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಕುಡಿಯಾದ ನಿಖಿಲ್ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾರ ಪುತ್ರ. ರಾಜಕೀಯದ ಜತೆಗೆ ನಟನೆ ಯಲ್ಲೂ ಒಲವು ಹೊಂದಿರುವ ಅವರು ‘ಜಾಗ್ವಾರ್’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿ ದ್ದರು. ನಂತರ ‘ಸೀತಾರಾಮ ಕಲ್ಯಾಣ’ ಹಾಗೂ ’ಕುರುಕ್ಷೇತ್ರ’ಗಳಲ್ಲಿ ನಟಿಸಿ ಸೈ ಎನಿಸಿ ಕೊಂಡಿದ್ದಾರೆ. ರೇವತಿ, ಕಾಂಗ್ರೆಸ್ ಮುಖಂಡ ಕೃಷ್ಣಪ್ಪ ಅವರ ಸಂಬಂಧಿ ಮಂಜು ಅವರ ಪುತ್ರಿ. ಎಂಸಿಎ ಪದವೀಧರೆ. ಸದ್ಯ ಬೆಂಗಳೂರಿನಲ್ಲೇ ವಾಸವಿದ್ದಾರೆ.

ಅಂದಹಾಗೆ ಇದು ಹಿರಿಯರು ಗೊತ್ತು ಮಾಡಿದ ಮದುವೆ. ಏಪ್ರಿಲ್‌ನಲ್ಲಿ ಇವರಿಬ್ಬರ ವಿವಾಹ ನಡೆಯಲಿದೆ. ಇದಕ್ಕಾಗಿ‌ ರಾಮನಗರ ಸಮೀಪದ ಜಾನಪದ ಲೋಕದ ಬಳಿ 54 ಎಕರೆ ಜಮೀನು ಗುರುತಿಸಲಾಗಿದೆ. ಅಲ್ಲಿಯೇ ಸೆಟ್ ಹಾಕಿ ಮಗನ ಮದುವೆ ಮಾಡಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು