ಸೋಮವಾರ, ಫೆಬ್ರವರಿ 24, 2020
19 °C

ಡಿಸೆಂಬರ್ 5ಕ್ಕೆ ರಚಿತಾ ರಾಮ್‌ ಸಹೋದರಿ ನಿತ್ಯಾ ಮದುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Nitya Ram

‘ಡಿಂಪಲ್‌ ಕ್ವೀನ್’ ರಚಿತಾ ರಾಮ್ ಅವರ ಸಹೋದರಿ ನಿತ್ಯಾ ರಾಮ್ ಅನ್ನುವುದು ಎಲ್ಲರಿಗೂ ಗೊತ್ತು. ಬೆಳ್ಳಿತೆರೆಯಲ್ಲಿ ರಚಿತಾ ಸಖತ್ ಬ್ಯುಸಿ.‌ ಹಾಗೆಯೇ, ನಿತ್ಯಾ ಕೂಡ ಕಿರುತೆರೆಯ ಕಣ್ಮಣಿ.

‘ಮುದ್ದು ಮನಸೇ’ ಚಿತ್ರದ ಮೂಲಕ ಹಿರಿತೆರೆಯಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು ನಿತ್ಯಾ. ಆದರೆ, ಅವರಿಗೆ ಬೆಳ್ಳಿತೆರೆಯಲ್ಲಿ ಅದೃಷ್ಟ ಒಲಿಯಲಿಲ್ಲ. ಹಾಗೆಂದು ಅವರು ಬೇಜಾರು‌ ಮಾಡಿಕೊಳ್ಳಲಿಲ್ಲ. ಉದಯ ಟಿ.ವಿಯಲ್ಲಿ‌ ಪ್ರಸಾರವಾಗುತ್ತಿರುವ ‘ನಂದಿನಿ’ ಧಾರಾವಾಹಿಯಲ್ಲಿನ ನಂದಿನಿ ಪಾತ್ರದ‌ ಮೂಲಕ ಜನಮನ ಸೆಳೆದಿದ್ದಾರೆ.

ಈಗ ನಿತ್ಯಾ ರಾಮ್ ಅವರು ಉದ್ಯಮಿಯೊಬ್ಬರ ಕೈಹಿಡಿಯಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಡಿಸೆಂಬರ್ 5ರಂದು ಅದ್ದೂರಿಯಾಗಿ ಮದುವೆ ನಡೆಯಲಿದೆಯಂತೆ. ನಿತ್ಯಾ ಜೊತೆಗೆ ಸಪ್ತಪದಿ ತುಳಿಯಲಿರುವ ವರ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರಂತೆ. 

ಚಂದನವನದಲ್ಲಿ ಈಗ ಮದುವೆಯ ಸೀಸನ್ ಆರಂಭಗೊಂಡಿದೆ. ಇತ್ತೀಚೆಗೆ ನಟ ರಿಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಟ ಧ್ರುವ ಸರ್ಜಾ ಅವರೂ ಹಸೆಮಣೆ ಏರಲು ರೆಡಿಯಾಗುತ್ತಿದ್ದಾರೆ. ಈಗ ನಿತ್ಯಾ ಮದುವೆಯ ತಯಾರಿಯಲ್ಲಿದ್ದಾರೆ. ಹಾಗಾಗಿ, ಅವರ ಸಹೋದರಿ ರಚಿತಾಗೆ ಖುಷಿಯಾಗಿದೆಯಂತೆ.

ನಿತ್ಯಾ ರಾಮ್

 

ನಿತ್ಯಾ ರಾಮ್

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)