ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳು ಚಿತ್ರರಂಗದ ಖ್ಯಾತ ಸಿನಿಮಾ ಛಾಯಾಗ್ರಾಹಕ ಕೆ.ವಿ.ಆನಂದ್ ನಿಧನ

ಹೃದಯಾಘಾತದಿಂದ ಸಾವು, ಛಾಯಾಗ್ರಹಣ ಹಾಗೂ ನಿರ್ದೇಶನ ಎರಡೂ ಕ್ಷೇತ್ರದಲ್ಲೂ ಪ್ರಸಿದ್ದಿ
Last Updated 30 ಏಪ್ರಿಲ್ 2021, 6:03 IST
ಅಕ್ಷರ ಗಾತ್ರ

ಚೆನ್ನೈ: ತಮಿಳು ಚಿತ್ರರಂಗದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಖ್ಯಾತ ಛಾಯಾಗ್ರಾಹಕ ಮತ್ತು ಸಿನಿಮಾ ನಿರ್ದೇಶಕ ಕೆ.ವಿ.ಆನಂದ್‌(54) ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

‘ಆನಂದ್ ಅವರು ಇಲ್ಲಿನ ಆಸ್ಪತ್ರೆಯಲ್ಲಿ ಮುಂಜಾನೆ 3 ಗಂಟೆಗೆ ಹೃದಯಾಘಾದಿಂದ ನಿಧನರಾದರು‘ ಎಂದು ಸಿನಿಮಾ ಕ್ಷೇತ್ರದ ಪ್ರಚಾರಕ ರಿಯಾಜ್‌ ಕೆ ತಿಳಿಸಿದ್ದಾರೆ.

ಫೋಟೊ ಜರ್ನಲಿಸ್ಟ್‌ ಆಗಿದ್ದ ಆನಂದ್‌, 1994 ರಲ್ಲಿ ಮಲಯಾಳಂ ಚಲನಚಿತ್ರ 'ತೇನ್ವಿನ್ ಕೊಂಬತ್'ದ ಮೂಲಕ ಸಿನಿಮಾ ಛಾಯಾಗ್ರಹಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಛಾಯಾಗ್ರಹಣ ಮಾಡಿದ ಈ ಮೊದಲ ಸಿನಿಮಾಕ್ಕೆ ರಾಷ್ಟ್ರಮಟ್ಟದ ಉತ್ತಮ ಸಿನಿಮಾ ಛಾಯಾಗ್ರಾಹಕ ಪ್ರಶಸ್ತಿ ಲಭ್ಯವಾಗಿತ್ತು.

ಒಂದು ದಶಕದ ಕಾಲ ಸಿನಿಮಾ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಆನಂದ್, 2005ರಲ್ಲಿ ತಮಿಳು ಚಿತ್ರ 'ಕಾನಾ ಕಾಂಡೆನ್' (2005) ನಿರ್ದೇಶಿಸುವ ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು.

'ಪುಣ್ಯ ಭೂಮಿ ನಾ ದೇಸಂ', 'ಕಾದಲ್ ದೇಸಂ', 'ಚಂದ್ರಲೇಖ', 'ಮುಧಲವನ್', 'ಜೋಶ್', 'ನಾಯಕ್: ದಿ ರಿಯಲ್ ಹೀರೋ', 'ಬಾಯ್ಸ್, 'ಖಾಕಿ', 'ಶಿವಾಜಿ' ಮುಂತಾದ ಚಿತ್ರಗಳಿಗೆ ಆನಂದ್ ಛಾಯಾಗ್ರಹಣ ಮಾಡಿದ್ದಾರೆ.

‘ಕೊ, ಅಯನ್, ಮಾತ್ರನ್‌, ಆನಗನ್‌ ಮತ್ತು ಕಾವನ್ ಮತ್ತು ಕಾಪ್ಪಾನ್‌ – ಇವು ಆನಂದ್ ಅವರು ನಿರ್ದೇಶಿಸಿರುವ ಯಶಸ್ವಿ ಚಲನ ಚಿತ್ರಗಳು.

‘ಆನಂದ್ ಅವರು ಫೋಟೊಜರ್ನಲಿಸ್ಟ್‌ ಆಗಿ ವೃತ್ತಿ ಬದುಕು ಆರಂಭಿಸಿದರು. ನಂತರ ಸ್ವಂತ ಪರಿಶ್ರಮ ಮತ್ತು ಹಲವು ಪ್ರಯತ್ನಗಳೊಂದಿಗೆ ಸಿನಿಮಾ ಛಾಯಾಗ್ರಹಕರಾಗಿ– ಸಿನಿಮಾ ನಿರ್ದೇಶಕರಾಗಿ ರೂಪುಗೊಂಡರು‘ ಎಂದು ಖ್ಯಾತ ನಟ, ಮಕ್ಕಳ್ ನೀದಿ ಮಯ್ಯಮ್‌ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ನೆನಪಿಸಿಕೊಂಡಿದ್ದಾರೆ.

‘ಆನಂದ್ ಅವರ ಅಗಲಿಕೆಯಿಂದ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ‘ ಎಂದು ಕಮಲ್ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT