ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್‌ ಜನ್ಮದಿನದ ಪ್ರಯುಕ್ತ ಮಾರ್ಚ್‌ 15ಕ್ಕೆ ಜಾಕಿ ಸಿನಿಮಾ ರಿರಿಲೀಸ್‌!

‘ದುನಿಯಾ’ ಸೂರಿ ನಿರ್ದೇಶನದ ‘ಜಾಕಿ’ ಸಿನಿಮಾ: ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮಾಹಿತಿ
Published 27 ಫೆಬ್ರುವರಿ 2024, 10:23 IST
Last Updated 27 ಫೆಬ್ರುವರಿ 2024, 10:23 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ಮಾರ್ಚ್‌ 17ರಂದು ಸ್ಯಾಂಡಲ್‌ವುಡ್‌ನ ‘ಪವರ್‌ ಸ್ಟಾರ್‌’ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನ. ಈ ಹೊಸ್ತಿಲಲ್ಲೇ ಅಭಿಮಾನಿಗಳಿಗೆ ಖುಷಿಯಾಗುವ ಸುದ್ದಿ ನೀಡಿದ್ದಾರೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌. ಮಾರ್ಚ್‌ 15ರಂದು ಪುನೀತ್‌ ನಟನೆಯ ಹಿಟ್‌ ಸಿನಿಮಾ ‘ಜಾಕಿ’ ರಿರಿಲೀಸ್‌ ಆಗಲಿದೆ. 

ಪುನೀತ್‌ ಅಗಲಿದ ದಿನದಿಂದಲೂ(2021ರ ಅ.29) ಒಂದಲ್ಲ ಒಂದು ರೀತಿಯಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸಂಭ್ರಮಿಸುತ್ತಲೇ ಬಂದಿದ್ದಾರೆ. 2022ರ ಮಾರ್ಚ್‌ 17ರಂದು ‘ಪುನೀತ್‌’ ನಟನೆಯ ಕೊನೆಯ ಕಮರ್ಷಿಯಲ್‌ ಸಿನಿಮಾ ‘ಜೇಮ್ಸ್‌’ ಬಿಡುಗಡೆಗೊಂಡಿತ್ತು.

ಅಂದು ವಿಶ್ವವ್ಯಾಪಿ 4 ಸಾವಿರಕ್ಕೂ ಅಧಿಕ ತೆರೆಗಳಲ್ಲಿ ‘ಜೇಮ್ಸ್‌’ ಪ್ರದರ್ಶನ ಕಂಡಿತ್ತು. ಇದನ್ನೊಂದು ಹಬ್ಬವಾಗಿ ಅಭಿಮಾನಿಗಳು ಆಚರಿಸಿದ್ದರು. ಈ ಮೂಲಕ ನೆಚ್ಚಿನ ನಟನಿಗೆ ನಮನ ಸಲ್ಲಿಸಿದ್ದರು. ಇದಾದ ಬಳಿಕ ಎಸ್‌. ನಾಗೇಂದ್ರ ಪ್ರಸಾದ್‌ ನಿರ್ದೇಶನದ ‘ಲಕ್ಕಿಮ್ಯಾನ್‌’ 2022ರ ಸೆ.9ರಂದು ತೆರೆಕಂಡಿತ್ತು. ಇದರಲ್ಲಿ ಪುನೀತ್‌ ಪ್ರೇಕ್ಷಕರೆದುರು ದೇವರಾಗಿ ಪ್ರತ್ಯಕ್ಷವಾಗಿದ್ದರು.

ಇದನ್ನು ಕಂಡು ಅಭಿಮಾನಿಗಳು ಭಾವುಕರಾಗಿದ್ದರು. 2022ರ ಅಕ್ಟೋಬರ್‌ 28ರಂದು ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ, ‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಅವರ ಜೊತೆಗೂಡಿ ಪುನೀತ್‌ ರಾಜ್‌ಕುಮಾರ್‌ ತಯಾರಿಸಿದ್ದ ಡಾಕ್ಯೂಫಿಲಂ ‘ಗಂಧದಗುಡಿ’ ಬಿಡುಗಡೆಯಾಗಿತ್ತು. ಇದೇ ಡಾಕ್ಯುಫಿಲಂ 2023ರ ಮಾರ್ಚ್‌ 17ರಂದು ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಇದೀಗ ಪುನೀತ್‌ ಅವರ ಸಿನಿಮಾಗಳ ರಿರಿಲೀಸ್‌ ಅಭಿಮಾನಿಗಳಿಗೆ ಖುಷಿ ತಂದಿದೆ. 

‘ದುನಿಯಾ’ ಸೂರಿ ನಿರ್ದೇಶನದ ‘ಜಾಕಿ’ ಸಿನಿಮಾವನ್ನು ಪಿಆರ್‌ಕೆ ಪ್ರೊಡಕ್ಷನ್ಸ್‌ ಪ್ರಸೆಂಟ್‌ ಮಾಡುತ್ತಿದ್ದು, ಕೆಆರ್‌ಜಿ ಸ್ಟುಡಿಯೋಸ್‌ ರಿರಿಲೀಸ್‌ ಮಾಡುತ್ತಿದೆ. ಎಲ್ಲೆಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿಯನ್ನು ಕೆಆರ್‌ಜಿ ಹಂಚಿಕೊಂಡಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಿನಿಮಾ ಮರು ಬಿಡುಗಡೆಯಾಗಲಿ ಎನ್ನುವ ಬೇಡಿಕೆಯನ್ನು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಕೆಆರ್‌ಜಿ ಮುಂದೆ ಇಟ್ಟಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT