ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್‌ ದೇವರಕೊಂಡ–ಸಮಂತಾ ಅಭಿಯನದ ಖುಷಿ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು?

Published 2 ಸೆಪ್ಟೆಂಬರ್ 2023, 13:13 IST
Last Updated 2 ಸೆಪ್ಟೆಂಬರ್ 2023, 13:13 IST
ಅಕ್ಷರ ಗಾತ್ರ

ಹೈದಾರಬಾದ್‌: ನಟ ವಿಜಯ್‌ ದೇವರಕೊಂಡ ಹಾಗೂ ನಟಿ ಸಮಂತಾ ರುತ್‌ ಪ್ರಭು ಅಭಿಯನದ ರೊಮ್ಯಾಂಟಿಕ್ ಚಿತ್ರ ’ಖುಷಿ‘ ಮೊದಲ ದಿನ ವಿಶ್ವದಾದ್ಯಂತ ₹30 ಕೋಟಿ ಕಲೆಕ್ಷನ್‌ ಮಾಡಿದೆ ಎಂದು ಮೈತ್ರಿ ಮೂವೀಸ್‌ ನಿರ್ಮಾಣ ಸಂಸ್ಥೆ ಹೇಳಿದೆ.

ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟರ್‌ ಹಂಚಿಕೊಂಡಿರುವ ನಿರ್ಮಾಣ ಸಂಸ್ಥೆ, ಮೊದಲ ದಿನವು ಭರ್ಜರಿ ಪ್ರದರ್ಶನ ಕಂಡಿರುವ ತೆಲುಗಿನ ‘ಖುಷಿ’ ಸಿನಿಮಾವು ₹30 ಕೋಟಿ ಗಳಿಸಿದೆ. ಎರಡನೇ ದಿನವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದು ತಿಳಿಸಿದೆ.

ಖುಷಿ ಚಿತ್ರವನ್ನು ‘ಮಜಲಿ‘ ಸಿನಿಮಾದ ನಿರ್ದೇಶಕ ಶಿವ ನಿರ್ವಾಣ್ ನಿರ್ದೇಶಿಸಿದ್ದಾರೆ. ನಾಗಚೈತನ್ಯ ಹಾಗೂ ಸಮಂತಾ ‘ಮಜಲಿ‘ ಚಿತ್ರದಲ್ಲಿ ಅಭಿನಯಿಸಿದ್ದರು.

2018ರಲ್ಲಿ ತೆರೆಕಂಡಿದ್ದ ಮಹಾನಟಿ ಸಿನಿಮಾದ ನಂತರ ‘ಖುಷಿ ಸಿನಿಮಾದ‘ ಮೂಲಕ ಎರಡನೇ ಬಾರಿಗೆ ವಿಜಯ್‌ ಹಾಗೂ ಸಮಂತಾ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT