ಲಾಸ್ ಏಂಜಲೀಸ್: 95ನೇ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದ್ದು, 'ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್' ಸಿನಿಮಾವು ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಈ ಚಿತ್ರವನ್ನು ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಸ್ಕೀನೆರ್ಟ್ ಅವರು ನಿರ್ದೇಶಿಸಿದ್ದಾರೆ.

'ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್' ಚಿತ್ರವು, 'ದಿ ಬನ್ಶೀಸ್ ಆಫ್ ಇನಿಶೆರಿನ್', 'ದಿ ಫ್ಯಾಬೆಲ್ಮ್ಯಾನ್ಸ್', 'ಟಾರ್' ಮತ್ತು 'ಟ್ರಯಾಂಗಲ್ ಆಫ್ ಸ್ಯಾಡ್ನೆಸ್' ಸಿನಿಮಾಗಳೊಡನೆ ಸ್ಪರ್ಧಿಸಿ, ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಸ್ಕಿನೆರ್ಟ್ ತನ್ನ ಗೆಲುವನ್ನು ಶಾಲಾ ಶಿಕ್ಷಕರಿಗೆ ಅರ್ಪಿಸಿ ಮಾತನಾಡಿದ ಅವರು, ‘ನೀವು ನನಗೆ ಶಿಕ್ಷಣ ಮತ್ತು ಸ್ಫೂರ್ತಿ ನೀಡಿದ್ದೀರಿ’ ಎಂದು ಹೇಳಿದ್ದಾರೆ.

ಕ್ವಾನ್ ಮಾತನಾಡಿ ‘ನಾನು ಚಿತ್ರಕಥೆಗಾರ ಅಥವಾ ಕಥೆಗಾರನಾಗಬಹುದೆಂದು ಎಂದಿಗೂ ಯೋಚಿಸಲಿಲ್ಲ. ನನ್ನನ್ನು ನಂಬಿದ್ದಕ್ಕಾಗಿ ಹೆಂಡತಿ, ತಾಯಿ ಮತ್ತು ಸ್ಕೀನೆರ್ಟ್ ಅವರಿಗೆ ಧನ್ಯವಾದ ಎಂದು ಹೇಳಿದ್ದಾರೆ.

'ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್' ಚೈನೀಸ್-ಅಮೆರಿಕನ್ ವಲಸಿಗ ಎವೆಲಿನ್ ವಾಂಗ್ ಮೇಲೆ ಕೇಂದ್ರೀಕೃತ ಚಿತ್ರವಾಗಿದೆ.

ಚಿತ್ರದಲ್ಲಿ ಮಿಚೆಲ್ ಯೋಹ್ ಎವೆಲಿನ್ ಪಾತ್ರದಲ್ಲಿ ನಟಿಸಿದ್ದಾರೆ, ಸ್ಟೆಫನಿ ಹ್ಸು, ಕೆ ಹುಯ್ ಕ್ವಾನ್, ಜೆನ್ನಿ ಸ್ಲೇಟ್, ಹ್ಯಾರಿ ಶುಮ್ ಜೂನಿಯರ್, ಜೇಮ್ಸ್ ಹಾಂಗ್ ಮತ್ತು ಜೇಮೀ ಲೀ ಕರ್ಟಿಸ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಇವನ್ನೂ ಓದಿ: Oscars 2023| ತಮಿಳಿನ 'ದಿ ಎಲಿಫೆಂಟ್ ವಿಸ್ಪರರ್ಸ್'ಗೆ ಪ್ರಶಸ್ತಿ

Oscars 2023 | ನಾಟು ನಾಟು ಹಾಡಿಗೆ ಅತ್ಯುತ್ತಮ ಹಾಡು ಪ್ರಶಸ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.