ಭಾರತದಲ್ಲಿ ಮದುವೆ, ನಿಶ್ಚಿತಾರ್ಥ ಇನ್ನಿತರ ಸಮಾರಂಭಗಳಲ್ಲಿ ಸಿನಿಮಾ ಹಾಡುಗಳು ಇಲ್ಲದೇ ಕಾರ್ಯಕ್ರಮ ಪೂರ್ಣಗೊಳ್ಳುವುದಿಲ್ಲ. ಇದು ಪಾಕಿಸ್ತಾನಕ್ಕೂ ಅನ್ವಯಿಸುತ್ತದೆ. ಪಾಕಿಸ್ತಾನದಲ್ಲಿ ಧುರಂಧರ್ ಸಿನಿಮಾ ಅಧಿಕೃತವಾಗಿ ನಿಷೇಧವನ್ನು ಎದುರಿಸುತ್ತಿದ್ದರೂ, ನೆರೆಯ ದೇಶದ ನಿವಾಸಿಗಳು ಧುರಂಧರ್ ವೀಕ್ಷಿಸುತ್ತಾ, ಸಿನಿಮಾ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ.
.ಭಾರತದೊಂದಿಗಿನ ಸಂಘರ್ಷ ಶಮನದಲ್ಲಿ ಚೀನಾ ಪಾತ್ರವೂ ಇತ್ತು: ಪಾಕಿಸ್ತಾನ.ಭಾರತದ ಜೊತೆಗಿನ ಸಂಘರ್ಷ ಶಮನದಲ್ಲಿ ಮಧ್ಯಸ್ಥಿಕೆ: ಚೀನಾ ವಾದ ಬೆಂಬಲಿಸಿದ ಪಾಕಿಸ್ತಾನ.
ಸಾಮಾಜಿಕ ಜಾಲತಾಣಗಳಲ್ಲಿ ಧುರಂಧರ್ ಸಿನಿಮಾ ಹಾಡಿಗೆ ಪಾಕಿಸ್ತಾನದ ಯುವಸಮೂಹ ರೀಲ್ಗಳನ್ನು ಮಾಡಿದ್ದಾರೆ. ಅದರಲ್ಲಿ ವಿಶೇಷ ಏನೆಂದರೆ ಮದುವೆ ಸಮಾರಂಭದಲ್ಲಿ ಇಬ್ಬರು ಯುವತಿಯರು ಧುರಂಧರ್ ಸಿನಿಮಾದ ‘ಶರಾರತ್’ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.

ವಿಡಿಯೊದಲ್ಲಿ ಪಾಕಿಸ್ತಾನದ ವಿವಾಹ ಸಂಭ್ರಮಾಚರಣೆಯಲ್ಲಿ ಇಬ್ಬರು ಯುವತಿಯರು ಶರಾರತ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ಇಬ್ಬರ ನೃತ್ಯಕ್ಕೆ ಮದುವೆಯಲ್ಲಿ ನೆರೆದಿದ್ದ ಅತಿಥಿಗಳು ಚಪ್ಪಾಳೆ ತಟ್ಟುತ್ತಾ ಹುರಿದುಂಬಿಸಿದ್ದಾರೆ. ಧುರಂಧರ್ ಸಿನಿಮಾದ ಈ ಶರಾರತ್ ಹಾಡನ್ನು ಜಾಸ್ಮಿನ್ ಸ್ಯಾಂಡ್ಲಾಸ್ ಮತ್ತು ಮಧುಬಂತಿ ಬಾಗ್ಚಿ ಹಾಡಿದ್ದಾರೆ. ಇದರಲ್ಲಿ ಕ್ರಿಸ್ಟಲ್ ಡಿಸೋಜಾ ಮತ್ತು ಆಯೇಷಾ ಖಾನ್ ಡ್ಯಾನ್ಸ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.