ಶನಿವಾರ, ಜನವರಿ 25, 2020
22 °C

‘ಫ್ಯಾಂಟಮ್‌’ನಲ್ಲಿ ಸುದೀಪ್‌ಗೆ ಸಮಂತಾ ಹೀರೊಯಿನ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನೂಪ್‌ ಭಂಡಾರಿ ನಿರ್ದೇಶಿಸಲಿರುವ ‘ಫ್ಯಾಂಟಮ್‌’ ಚಿತ್ರಕ್ಕೆ ನಟ ಸುದೀಪ್‌ ನಾಯಕರಾಗಿರುವುದು ಎಲ್ಲರಿಗೂ ತಿಳಿದಿದೆ. ಇದಕ್ಕೆ ಬಂಡವಾಳ ಹೂಡುತ್ತಿರುವುದು ಜಾಕ್‌ ಮಂಜು. ಸೂರಪ್ಪಬಾಬು ನಿರ್ಮಾಣದ ಶಿವಕಾರ್ತಿಕ್‌ ನಿರ್ದೇಶನದ ‘ಕೋಟಿಗೊಬ್ಬ 3’ ಚಿತ್ರದ ಬಳಿಕ ಈ ಸಿನಿಮಾ ಸೆಟ್ಟೇರಲಿದೆ. ಮುಂದಿನ ವರ್ಷ ಸೆಟ್ಟೇರಲಿರುವ ‘ಫ್ಯಾಂಟಮ್‌’ ಚಿತ್ರದಲ್ಲಿ ಕಿಚ್ಚನಿಗೆ ಸಮಂತಾ ಅಕ್ಕಿನೇನಿ ನಾಯಕಿಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಈ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ.

2012ರಲ್ಲಿ ತೆರೆಕಂಡ ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ತೆಲುಗಿನ ‘ಈಗ’ ಚಿತ್ರದಲ್ಲಿ ಸುದೀಪ್‌ ಮತ್ತು ಸಮಂತಾ ಒಟ್ಟಾಗಿ ನಟಿಸಿದ್ದರು. ಕಿಚ್ಚನ ವಿರುದ್ಧ ಬಿಂದು ನಟನೆಯೂ ಸಿನಿಪಂಡಿತರ ಮೆಚ್ಚುಗೆ ಗಳಿಸಿತ್ತು. ಈಗ ಆಕೆಯನ್ನು ಕನ್ನಡಕ್ಕೆ ಕರೆತರುವ ಆಲೋಚನೆಯಲ್ಲಿದೆ ‘ಫ್ಯಾಂಟಮ್‌’ ಚಿತ್ರತಂಡ.

ಕನ್ನಡದಲ್ಲಿ ಬಿಡುಗಡೆಗೊಂಡು ತೆಲುಗು ಮತ್ತು ತಮಿಳಿಗೆ ರಿಮೇಕ್‌ ಆಗಿದ್ದ ‘ಯು ಟರ್ನ್’ ಚಿತ್ರದಲ್ಲಿ ಸಮಂತಾ ನಟಿಸಿದ್ದರು. ನಿರ್ಮಾಪಕರ ಕೋರಿಕೆಗೆ ಆಕೆ ಒಪ್ಪಿಕೊಂಡರೆ ಕನ್ನಡದಲ್ಲಿ ‘ಫ್ಯಾಂಟಮ್‌’ ಅವರ ಮೊದಲ ಚಿತ್ರವಾಗಲಿದೆ.

ನಿರೂಪ್‌ ಭಂಡಾರಿಯೂ ನಟನೆ

ಅನೂಪ್‌ ಭಂಡಾರಿ ಅವರ ತಮ್ಮ ನಟ ನಿರೂಪ್‌ ಭಂಡಾರಿ ಅವರೂ ‘ಫ್ಯಾಂಟಮ್‌’ ಚಿತ್ರದಲ್ಲಿ ಸುದೀಪ್‌ ಜೊತೆಗೆ ನಟಿಸಲಿದ್ದಾರೆ ಎಂಬ ಸುದ್ದಿಯೂ ಹೊರಬಿದ್ದಿದೆ.

‘ರಂಗಿತರಂಗ’, ‘ರಾಜರಥ’ ಮತ್ತು ‘ಆದಿಲಕ್ಷ್ಮಿಪುರಾಣ’ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ನಿರೂಪ್‌ಗೆ ಇದು ನಾಲ್ಕನೇ ಚಿತ್ರ. ಮೊದಲ ಬಾರಿಗೆ ಅವರು ಕಿಚ್ಚನೊಟ್ಟಿಗೆ ತೆರೆ ಹಂಚಿಕೊಳ್ಳುವ ಖುಷಿಯಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು