ಶನಿವಾರ, ಫೆಬ್ರವರಿ 29, 2020
19 °C
oscar awards 2020

‘ಪ್ಯಾರಸೈಟ್’ಗೆ ಆಸ್ಕರ್ 2020

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಕ್ಷಿಣ ಕೊರಿಯಾ ಸಿನಿಮಾ ‘ಪ್ಯಾರಸೈಟ್’ ಅತ್ಯುತ್ತಮ ಸಿನಿಮಾ ಆಸ್ಕರ್‌ ಪ್ರಶಸ್ತಿ ಗೆದ್ದುಕೊಂಡಿದೆ. 2020ನೇ ಸಾಲಿನ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ (ಆಸ್ಕರ್) ಭಾನುವಾರ ರಾತ್ರಿ ಲಾಸ್‌ ಏಂಜಲಿಸ್‌ನಲ್ಲಿ ನಡೆದ ಸಂಭ್ರಮದ ಕಾರ್ಯಕ್ರಮದಲ್ಲಿ ಘೋಷಣೆಯಾಗಿದೆ.

‘ಪ್ಯಾರಸೈಟ್’ ಸಿನಿಮಾದ ನಿರ್ದೇಶಕ ಬಾಂಗ್‌ ಜೂನ್ ಹೂ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ. ಈ ಸಿನಿಮಾ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

‘ಪ್ಯಾರಸೈಟ್’ ಸಿನಿಮಾ ನಿರ್ದೇಶಕ ಬಾಂಗ್‌ ಜೂನ್ ಹೂ

‘ಜೋಕರ್’ ಸಿನಿಮಾದ ಅದ್ಭುತ ನಟನೆಗೆ ಜೋಕ್ವಿನ್ ಫೀನಿಕ್ಸ್ ಅತ್ಯುತ್ತಮ ನಟ ಹಾಗೂ ‘ಜ್ಯೂಡಿ’ ಸಿನಿಮಾ ನಟನೆಗೆ ರಿನೇ ಜೆಲ್‌ವೆಗರ್‌ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

‘ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್’ ಸಿನಿಮಾದ ನಟನೆಗಾಗಿ ನಟ ಬ್ರ್ಯಾಡ್ ಪಿಟ್ ಅತ್ಯುತ್ತಮ ಫೋಷಕ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಬ್ರ್ಯಾಡ್ ಪಿಟ್ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅತ್ಯುತ್ತಮ ಫೋಷಕ ನಟಿ ಪ್ರಶಸ್ತಿ ಲಭಿಸಿದೆ.

ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದ ನಟ ಜಾಕ್ವಿನ್ ಫೀನಿಕ್ಸ್ ಅಭಿನಯದ ಸಿನಿಮಾ ಜೋಕರ್‌ 11 ವಿಭಾಗದಲ್ಲಿ ನಾಮಿನೇಷನ್‌ ಆಗಿತ್ತು. ಈ ಸಿನಿಮಾವೇ ಹೆಚ್ಚು ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಭಾರತದಿಂದ ನಟ ರಣವೀರ್ ಸಿಂಗ್ ಹಾಗೂ ಅಲಿಯಾ ಭಟ್ ಅಭಿನಯದ ‘ಗಲ್ಲಿ ಬಾಯ್’ ಅಧಿಕೃತ ಎಂಟ್ರಿ ಪಡೆದುಕೊಂಡಿತ್ತು. ಆದರೆ, ಅಂತಿಮ ಹಂತದಲ್ಲಿ ಸಿನಿಮಾ ಹೊರಬಂತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು