ಬುಧವಾರ, ಫೆಬ್ರವರಿ 19, 2020
27 °C

ಪಾರ್ವತಿಯ ದಿಟ್ಟತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಚಿತ್ರರಂಗದ ಸೆಟ್‌ನಲ್ಲಿ ಬಾತ್ ರೂಂ ಸೌಕರ್ಯದ ಕೊರತೆ ಬಗ್ಗೆ ಮಲಯಾಳಂ ಸಿನಿಮಾ ಕಲಾವಿದರ ಸಂಘಟನೆಯಾದ ’ಅಮ್ಮ’ ಎಂಬ ಸಂಘಟನೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಕ್ಕೆ ನನಗೆ ಬಾತ್ ರೂಂ ಪಾರ್ವತಿ ಎಂಬ ಅಡ್ಡ ಹೆಸರಿಟ್ಟಿದ್ದರು. ನಾನು ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ’ ಎನ್ನುತ್ತಾರೆ ಮಲಯಾಳಂನ ಜನಪ್ರಿಯ ನಟಿ ಪಾರ್ವತಿ ತಿರುವೋತ್ತ್.

ವುಮೆನ್ ಇನ್ ಸಿನಿಮಾ ಕಲೆಕ್ಟಿವ್ ಆರಂಭವಾದ ನಂತರ ಸಿನಿಮಾ ರಂಗದಲ್ಲಿ ಬದಲಾವಣೆ ಬಂದಿದೆ. ಈಗ ಸಿನಿಮಾ ಸೆಟ್‌ಗಳಲ್ಲಿ ವ್ಯಾನಿಟಿ ವ್ಯಾನ್ ಬಂದಿದೆ. ಈ ರೀತಿಯ ವಿಷಯಗಳನ್ನು ನಾವು ಮುಕ್ತವಾಗಿ ಹೇಳಬೇಕು. ನಮಗೆ ಅಗತ್ಯವಾದುದನ್ನು ಕೇಳಬೇಕು. ಇನ್ನು ಮುಂದೆ ಸಿನಿಮಾ ರಂಗಕ್ಕೆ ಬರುವವರು ಈ ಕಷ್ಟಗಳನ್ನು ಅನುಭವಿಸಬಾರದು ಎಂಬುದೇ ನಮ್ಮ ಉದ್ದೇಶ.

ಸಿನಿಮಾ ರಂಗದಲ್ಲಿನ ಸೆಕ್ಸಿಸ್ಟ್ ಧೋರಣೆ, ಲಿಂಗ ತಾರತಮ್ಯ, ದೌರ್ಜನ್ಯಗಳ ಬಗ್ಗೆ ದಿಟ್ಟತನದಿಂದ ಮಾತನಾಡಿದಾಗ ಆಕೆ ಲೇವಡಿಗೊಳಗಾಗಿದ್ದರು. ಆದರೆ ಇದ್ಯಾವುದೂ ತನ್ನನ್ನು ಬಾಧಿಸುವುದಿಲ್ಲ ಎಂದ ನಟಿ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿ ಜನ ಮನ ಗೆದ್ದಿದ್ದರು.

2006ರಲ್ಲಿ ಔಟ್ ಆಫ್ ಸಿಲೆಬಸ್ ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಆಕೆ ನೋಟ್‌ಬುಕ್, ಬ್ಯಾಂಗಲೋರ್ ಡೇಸ್, ಎನ್ನ್ ನಿಂಡೆ ಮೊಯ್ದೀನ್, ಚಾರ್ಲಿ, ಟೇಕಾಫ್, ಉಯರೇ, ವೈರಸ್ ಮೊದಲಾದ ಚಿತ್ರಗಳ ಮೂಲಕ ಗಮನ ಸೆಳೆದಿದ್ದರು. 2007ರಲ್ಲಿ ಪುನೀತ್ ರಾಜ್‌ಕುಮಾರ್ ಜತೆ ಮಿಲನ, ಪೃಥ್ವಿ ಚಿತ್ರದಲ್ಲಿ ನಟಿಸಿದ್ದ ಪಾರ್ವತಿ ತಮ್ಮ 14 ವರ್ಷದ ಸಿನಿಮಾ ಪಯಣದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಜನಪ್ರಿಯರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)