ಮಂಗಳವಾರ, ಮಾರ್ಚ್ 21, 2023
28 °C

ಬಿಡುಗಡೆಯಾದ ಒಂದು ವಾರದಲ್ಲಿ ₹667 ಕೋಟಿ ಗಳಿಸಿದ ‘ಪಠಾಣ್‌’ ಸಿನಿಮಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಿವುಡ್‌ ನಟ ಶಾರೂಕ್‌ ಖಾನ್‌ ಅವರ ‘ಪಠಾಣ್‌’ ಸಿನಿಮಾ ಎಂಟು ದಿನಗಳಲ್ಲಿ ವಿಶ್ವದಾದ್ಯಂತ ₹667 ಕೋಟಿ ಗಳಿಸಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ‘ಯಶ್ ರಾಜ್ ಫಿಲ್ಮ್ಸ್’ (ವೈಆರ್‌ಎಫ್) ಗುರುವಾರ ತಿಳಿಸಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ಹಿಂದಿ ಚಿತ್ರವನ್ನು ತಮಿಳು ಮತ್ತು ತೆಲುಗಿನಲ್ಲಿ ಡಬ್ ಮಾಡಿ ಜನವರಿ 25 ರಂದು ಜಾಗತಿಕವಾಗಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಶಾರುಕ್‌ ಖಾನ್, ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ನಟಿಸಿದ್ದಾರೆ.

ಚಿತ್ರ ಬಿಡುಗಡೆಯಾದ ಎಂಟನೇ ದಿನವಾದ ಬುಧವಾರ ‘ಪಠಾಣ್‘ ಭಾರತದಲ್ಲಿ ₹18.25 ಕೋಟಿ ಸಂಗ್ರಹಿಸಿದೆ. (ಹಿಂದಿ - ₹17.50 ಕೋಟಿ, ಎಲ್ಲಾ ಡಬ್ಬಿಂಗ್ ಆವೃತ್ತಿಗಳಿಂದ ₹0.75 ಕೋಟಿ) ಎಂದು ಯಶ್‌ ರಾಜ್‌ ಫಿಲ್ಮ್ಸ್‌ ಹೇಳಿದೆ.

ಬಿಡುಗಡೆಯಾದಾಗಿನಿಂದ ಚಿತ್ರವು ಭಾರತದಲ್ಲಿ ₹348.50 (ಹಿಂದಿ -₹336 ಕೋಟಿ, ಡಬ್ಬಿಂಗ್‌ ₹12.50 ಕೋಟಿ) ಸಂಗ್ರಹಿಸಿದೆ. ವಿದೇಶಗಳಲ್ಲಿ ₹250 ಕೋಟಿಗಳನ್ನು ಗಳಿಸಿದೆ.

ಪ್ರಮೋಷನ್‌, ಸಂವಾದಗಳನ್ನು ಒಳಗೊಂಡ ಪ್ರಚಾರ ತಂತ್ರಗಳಿಂದ ದೂರವೇ ಉಳಿದಿದ್ದ ‘ಪಠಾಣ್‌’ ಚಿತ್ರ ಬಿಡುಗಡೆಗೂ ಮೊದಲು ವಿವಾದಕ್ಕೆ ಕಾರಣವಾಗಿತ್ತು.

ಚಿತ್ರದ ‘ಬೇಷರಮ್‌ ರಂಗ್‌’ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಬಟ್ಟೆ ಧರಿಸಿ ನರ್ತಿಸಿದ್ದರು. ಕೇಸರಿ ಬಣ್ಣವನ್ನು ಅವಮಾನಿಸುವ ಸಾಲುಗಳು ಗೀತೆಯಲ್ಲಿದೆ ಎಂಬ ಆಕ್ರೋಶವೂ ವ್ಯಕ್ತವಾಗಿತ್ತು. ಈ ಮೂಲಕ ಚಿತ್ರತಂಡ ಕೆಲವರ ಭಾವನೆ ಘಾಸಿಗೊಳಿಸಿದೆ ಎಂದು ಕೆಲ ಬಲಪಂಥೀಯ ಸಂಘಟನೆಗಳು ಚಿತ್ರ ಬಾಯ್ಕಾಟ್‌ ಕರೆ ನೀಡಿದ್ದವು. ದೇಶದ ಕೆಲವೆಡೆ ಪ್ರತಿಭಟನೆ, ಚಿತ್ರಮಂದಿರಕ್ಕೆ ದಾಳಿಯ ನಡುವೆಯೂ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಪಠಾಣ್‌ ಯಶಸ್ವಿಯಾಗಿದೆ. 4 ದಿನದಲ್ಲಿ ಚಿತ್ರ ವಿಶ್ವದಾದ್ಯಂತ ₹429 ಕೋಟಿ ಗಳಿಸಿತ್ತು.

ಇವುಗಳನ್ನೂ ಓದಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು