ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮಾನ್ ಚಾಲೀಸ್‌ ಪಠಿಸಿ ಪ್ರತಿಭಟನೆ : ಮಧ್ಯಪ್ರದೇಶದಲ್ಲಿ ‘ಪಠಾಣ್’ ಅಬ್ಬರ

Last Updated 25 ಜನವರಿ 2023, 9:19 IST
ಅಕ್ಷರ ಗಾತ್ರ

ಭೋಪಾಲ್ : ಬಲಪಂಥೀಯ ಸಂಘಟನೆಗಳ ಪ್ರತಿಭಟನೆಯ ನಡುವೆ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ಪಠಾಣ್’ಚಿತ್ರವು ರಾಜ್ಯದ ಚಿತ್ರಮಂದಿರಗಳಲ್ಲಿ ಬುಧವಾರ ತೆರೆ ಕಂಡಿದೆ.

ಶಾರುಖ್‌, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ಚಿತ್ರದ ಮೊದಲ ಪ್ರದರ್ಶನಕ್ಕಾಗಿ ಅಭಿಮಾನಿಗಳು ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಭೋಪಾಲ್, ಇಂದೋರ್, ಗ್ವಾಲಿಯರ್ ಮತ್ತು ಇತರ ಹಲವು ನಗರಗಳಲ್ಲಿನ ಚಿತ್ರಮಂದಿರಗಳಲ್ಲಿ ಉದ್ದನೆಯ ಸರತಿ ಸಾಲು ಕಂಡುಬಂದಿತ್ತು.

ಆದಾಗ್ಯೂ, ಬಲಪಂಥೀಯ ಸಂಘಟನೆಗಳ ಸದಸ್ಯರು ಚಲನಚಿತ್ರ ಪ್ರದರ್ಶನದ ವಿರುದ್ಧ ಚಿತ್ರ ಮಂದಿರಗಳ ಹೊರಗೆ ಪ್ರತಿಭಟನೆ ನಡೆಸಿದರು.

ಭೋಪಾಲ್‌ನ ರಂಗ್ ಮಹಲ್ ಚಿತ್ರಮಂದಿರದ ಹೊರಗೆ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ಪ್ರತಿಕೃತಿಗಳನ್ನು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಚಿತ್ರಮಂದಿರದ ಹೊರಗೆ ಹನುಮಾನ್ ಚಾಲೀಸ್‌ ಪಠಣವೂ ನಡೆಯಿತು

ಇಂದೋರ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಸದಸ್ಯರು ಸಪ್ನಾ ಸಂಗೀತಾ ಚಿತ್ರಮಂದಿರದ ಹೊರಗೆ ಪ್ರತಿಭಟಿಸಿದರು. ಚಿತ್ರಮಂದಿರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಿ ಮೊದಲ ಪ್ರದರ್ಶನ ನಡೆಸಲಾಯಿತು.

ಚಿತ್ರದ ‘ಬೇಷರಮ್‌ ರಂಗ್’ ಹಾಡು ಕೇಸರಿ ಪಡೆಯನ್ನು ಕೆರಳಿಸಿತ್ತು. ದೀಪಿಕಾ ಪಡುಕೋಣೆ ಈ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ತೊಟ್ಟು ಒಂದು ಗುಂಪಿನ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬ ಕೂಗು ಕೇಳಿ ಬಂದಿತ್ತು. ಬಾಯ್ಕಾಟ್‌ ಪಠಾಣ್‌, ಚಿತ್ರ ಬಿಡುಗಡೆಯಾದರೆ ಚಿತ್ರಮಂದಿರಕ್ಕೆ ಬೆಂಕಿ ಇಡಲಾಗುವುದು ಇತ್ಯಾದಿ ಬೆದರಿಕೆಗಳನ್ನು ಚಿತ್ರತಂಡ ಎದುರಿಸಿತ್ತು. ಇವೆಲ್ಲದರ ನಡುವೆ ಚಿತ್ರಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT