ಶನಿವಾರ, ನವೆಂಬರ್ 28, 2020
22 °C

ಪವನ್‌- ಪ್ರಣೀತಾ ಜೋಡಿ ‘ವಿರೂಪಾಕ್ಷʼದಲ್ಲಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಣೀತಾ ಸುಭಾಷ್‌ ಮತ್ತು ತೆಲುಗಿನ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಶೀಘ್ರವೇ ಹೊಸ ಚಿತ್ರದಲ್ಲಿ ಜತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ವಿರೂಪಾಕ್ಷʼ ಹೆಸರಿನ ಚಿತ್ರ ಎಂದು ಹೇಳಲಾಗುತ್ತಿದ್ದರೂ ಶೀರ್ಷಿಕೆಯನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಲಾಗಿಲ್ಲ. 

ಅಂದಹಾಗೆ ಈ ಚಿತ್ರವನ್ನು ನಿರ್ದೇಶಿಸುತ್ತಿರುವವವರು ಕ್ರಿಷ್‌. ಕ್ರಿಷ್‌ ಅವರು ಕಾಂಚಿ ಮತ್ತು ಗೌತಮಿ ಪುತ್ರ ಶಾತಕರ್ಣಿ ಚಿತ್ರಗಳ ಮೂಲಕ ಹೆಸರು ಮಾಡಿದ ನಿರ್ದೇಶಕ. ಚಿತ್ರವನ್ನು ಎ.ಎಂ. ರತ್ನ ನಿರ್ಮಿಸುತ್ತಿದ್ದಾರೆ.

ಹೊಸ ಚಿತ್ರವು ಪ್ರೀತಿಯ ಕಥಾವಸ್ತು ಹೊಂದಿದೆ. ಪವನ್‌ ಕಲ್ಯಾಣ್‌ ಮತ್ತು ಪ್ರಣೀತಾ ಇದರಲ್ಲಿ ಹೇಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಕುತೂಹಲ ಅಭಿಮಾನಿಗಳದ್ದು. 

ಈ ಹಿಂದೆ ಪವನ್‌- ಪ್ರಣೀತಾ ಜೋಡಿ ‘ಅತ್ತಾರೆಂಟಿಕಿ ದಾರೇದಿ’ ಎಂಬ ಸೂಪರ್‌ ಹಿಟ್‌ ಚಿತ್ರದಲ್ಲಿ ಅಭಿನಯಿಸಿ ಅಭಿಮಾನಿಗಳ ಮನಗೆದ್ದಿದ್ದರು. 

ಹೊಸ ಕಥೆ ಸ್ವಾತಂತ್ರ್ಯ ಪೂರ್ವದ ಘಟನಾವಳಿಗಳನ್ನು ಒಳಗೊಂಡ ಕಥಾವಸ್ತು ಹೊಂದಿದೆ. ಸದ್ಯ ಪವನ್‌ ಅವರು ‘ಕೋರ್ಟ್‌ ರೂಂ ಡ್ರಾಮಾ ವಕೀಲ್‌ ಸಾಬ್‌’ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು