ಬೆಂಗಳೂರು: ಇತ್ತೀಚಿಗೆ ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ, ನಿರ್ಮಾಪಕ ನರೇಶ್ ಅವರು ರಿಲೇಶನ್‌ಶೀಫ್‌ನಲ್ಲಿದ್ದಾರೆ ಎಂಬುದು ಹಾಗೂ ಇದಕ್ಕೆ ನರೇಶ್ ಪತ್ನಿ ವಿರೋಧ ವ್ಯಕ್ತಪಡಿಸಿದ್ದು ವ್ಯಾಪಕ ಸುದ್ದಿಯಾಗಿತ್ತು.
ಆದರೆ, ಇದೇ ನಟ–ನಟಿಯರಿಬ್ಬರು ಬೇರೆ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಹಾಸ್ಯ ನಟ ಅಲಿ, ನರೇಶ್ ಹಾಗೂ ಪವಿತ್ರಾ ಲೋಕೇಶ್ ಮುಖ್ಯಪಾತ್ರದಲ್ಲಿರುವ ‘ಅಂದರೂ ಬಾಗುಂಡಾಲಿ, ಅಂದಲೊ ನೇನು ಉಂಡಾಲಿ’ ಸಿನಿಮಾಬಿಡುಗಡೆಯಾಗಿದೆ.
ಈ ಚಿತ್ರದಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರ ಪಾತ್ರಗಳು ಗಮನ ಸೆಳೆದಿವೆ. ಹಾಸ್ಯಭರಿತ ಕೌಟುಂಬಿಕ ಮನರಂಜನೆಯಚಿತ್ರ ಇದಾಗಿದ್ದು ನೇರವಾಗಿ ಒಟಿಟಿ ವೇದಿಕೆಯಾದ ‘ಆಹಾವಿಡಿಯೊ’ದಲ್ಲಿ ಬಿಡುಗಡೆಯಾಗಿದೆ.
ಕಿರಣ್ ಶ್ರೀಪುರಂ ನಿರ್ದೇಶನದ ಈ ಚಿತ್ರವನ್ನು ನಟ ಅಲಿ ಹಾಗೂ ಇತರರು ನಿರ್ಮಾಣ ಮಾಡಿದ್ದಾರೆ.
‘ಚಲನಚಿತ್ರ ನಟಿ ಪವಿತ್ರಾ ಲೋಕೇಶ್ ತಮ್ಮ ಪತಿ, ತೆಲುಗು ಚಿತ್ರನಟ ನರೇಶ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ’ ಎಂದು ಆರೋಪಿಸಿ ರಮ್ಯಾ ರಘುಪತಿ ಎಂಬುವರು ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ ಘಟನೆ ಮೈಸೂರುನಗರದ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆನಡೆದಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.