ಶನಿವಾರ, ಅಕ್ಟೋಬರ್ 16, 2021
22 °C

ಟ್ರೈಲರ್ | ಚೇಷ್ಟೆ ಮಾಡಿ 'ಪೆಟ್ರೊಮ್ಯಾಕ್ಸ್‌’ ಹಚ್ಚಿದ ಸತೀಶ್ ನೀನಾಸಂ, ಹರಿಪ್ರಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸತೀಶ್ ನೀನಾಸಂ, ಹರಿಪ್ರಿಯಾ ನಟಿಸಿರುವ ‘ಪೆಟ್ರೊಮ್ಯಾಕ್ಸ್‌’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 2ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ವಿಜಯ್ ಪ್ರಸಾದ್ ನಿರ್ದೇಶನ ಮಾಡಿರುವ ಈ ಚಿತ್ರದ ಚಿತ್ರೀಕರಣ‌ ಮುಕ್ತಾಯವಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

 ’ಈ ಸಿನಿಮಾದಲ್ಲಿ ಚೇಷ್ಟೆಯೇ ಮುಖ್ಯ ಕಥಾಹಂದರ. ಮನರಂಜನೆ ಸಲುವಾಗಿ ಚೇಷ್ಟೆಯನ್ನು ಅಳವಡಿಸಲಾಗಿದೆ’ ಎಂದು ನಿರ್ದೇಶಕ ವಿಜಯ ಪ್ರಸಾದ್‌ ಹೇಳಿದ್ದಾರೆ.

ಟ್ರೈಲರ್‌ನಲ್ಲಿ ಚೇಷ್ಟೆಯ ಜೊತೆಗೆ ಗಾಢವಾದ ಕತೆಯ ಮೂಲಕ ಭಾವುಕ ಪಯಣವನ್ನು ಕಾಣಬಹುದು

ನಾಯಕ ನಟರಾಗಿ ಸತೀಶ್ ನೀನಾಸಂ, ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಕಾರುಣ್ಯ ರಾಮ್, ವಿಶೇಷ ಪಾತ್ರದಲ್ಲಿ ವಿಜಯಲಕ್ಷ್ಮೀ ಸಿಂಗ್ ಕಾಣಿಸಿಕೊಂಡಿದ್ದಾರೆ. ಗೊಂಬೆಗಳ ಲವ್ ಖ್ಯಾತಿ ಅರುಣ್‌, ನಾಗಭೂಷಣ್‌, ಭುವಿ ಮೊದಲಾದವರು ಈ ಸಿನಿಮಾದ ತಾರಾಬಳಗದಲ್ಲಿದ್ದಾರೆ. 

ಸತೀಶ್ ಪಿಕ್ಚರ್ ಹೌಸ್ ಅಡಿ ನೀನಾಸಂ ಸತೀಶ್‌ ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಸ್ಟುಡಿಯೊ 18 ಮತ್ತು ಪೆಟ್ರೊಮ್ಯಾಕ್ಸ್ ಪಿಕ್ಚರ್ಸ್ ಸಹ ನಿರ್ಮಾಣದಲ್ಲಿ ಸಾಥ್ ನೀಡಿದೆ. ಕತೆ, ಚಿತ್ರಕತೆ, ಸಂಗೀತ ನಿರ್ದೇಶನ ಅನೂಪ್ ಸೀಳಿನ್, ಕ್ಯಾಮೆರಾ ನಿರಂಜನ್‌ಬಾಬು, ಸಂಕಲನ ಸುರೇಶ್ ಅರಸ್, ಹೊಸ್ಮನೆ ಮೂರ್ತಿ ಕಲೆ, ವಿನಯ್ ಸಹ ನಿರ್ದೇಶನ ಚಿತ್ರಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು